2 Kings 6:3 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಒಬ್ಬ ವ್ಯಕ್ತಿಯು, “ದಯವಿಟ್ಟು ನಮ್ಮ ಜೊತೆಯಲ್ಲಿ ನೀನೂ ಬಾ” ಎಂದನು. ಎಲೀಷನು, “ಸರಿ, ನಾನೂ ನಿಮ್ಮ ಜೊತೆಯಲ್ಲಿ ಬರುತ್ತೇನೆ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರಲ್ಲೊಬ್ಬನು, “ದಯವಿಟ್ಟು ನೀನೂ, ನಿನ್ನ ಸೇವಕರು ನಮ್ಮ ಜೊತೆಯಲ್ಲಿ ಬರಬೇಕು” ಎಂದು ಬೇಡಿಕೊಂಡನು. ಅದಕ್ಕೆ ಎಲೀಷನು, “ಬರುತ್ತೇನೆ” ಎಂದು ಹೇಳಿ ಅವರೊಡನೆ ಹೊರಟನು.
Kannada BSI Bible 2016
ಆಗ ಅವರಲ್ಲಿ ಒಬ್ಬನು--ನೀನು ದಯಮಾಡಿ ನಿನ್ನ ಸೇವಕರ ಸಂಗಡ ಬಾ ಅಂದನು. ಅದಕ್ಕವನು--ನಾನು ಬರುತ್ತೇನೆ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ದಯವಿಟ್ಟು ನೀನೂ ನಿನ್ನ ಸೇವಕರಾದ ನಮ್ಮ ಜೊತೆಯಲ್ಲಿ ಬರಬೇಕು ಎಂದು ಬೇಡಿಕೊಂಡನು. ಎಲೀಷನು - ಬರುತ್ತೇನೆ ಎಂದು ಹೇಳಿ ಅವರೊಡನೆ ಹೊರಟನು.
Kannada Bible (KNCL) BSI 2016
ಅವರಲ್ಲೊಬ್ಬನು, “ದಯವಿಟ್ಟು ತಾವೂ ತಮ್ಮ ಸೇವಕರಾದ ನಮ್ಮ ಜೊತೆಯಲ್ಲಿ ಬರಬೇಕು,” ಎಂದು ಬೇಡಿಕೊಂಡನು. ಎಲೀಷನು, “ಬರುತ್ತೇನೆ,” ಎಂದು ಹೇಳಿ ಅವರೊಡನೆ ಹೊರಟನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅವರಲ್ಲಿ ಒಬ್ಬನು ಎಲೀಷನಿಗೆ, “ನೀವು ದಯಮಾಡಿ ನಿಮ್ಮ ಸೇವಕರ ಸಂಗಡ ಬರುವಿರಾ?” ಎಂದನು. ಅದಕ್ಕವನು, “ನಾನು ಬರುತ್ತೇನೆ,” ಎಂದನು.