2 Kings 6:9 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದರೆ ದೇವಮನುಷ್ಯನು (ಎಲೀಷನು) ಇಸ್ರೇಲಿನ ರಾಜನಿಗೆ ಒಂದು ಸಂದೇಶವನ್ನು ಕಳುಹಿಸಿ, “ನೀವು ಜಾಗರೂಕರಾಗಿರಿ! ನೀವು ಆ ಜಾಗದಲ್ಲಿ ತಿರುಗಾಡದಿರಿ! ಅರಾಮ್ಯರ ಸೈನಿಕರು ಅಲ್ಲಿ ಅಡಗಿದ್ದಾರೆ!” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದೇವರ ಮನುಷ್ಯನು ಇಸ್ರಾಯೇಲರ ಅರಸನಿಗೆ, “ಜಾಗರೂಕತೆಯಿಂದಿರಿ, ನೀವು ಇಂಥಿಂಥ ಸ್ಥಳದಲ್ಲಿ ಹೋಗಬಾರದು. ಅಲ್ಲಿ ಅರಾಮ್ಯರು ಅಡಗಿಕೊಂಡಿದ್ದಾರೆ” ಎಂದು ತಿಳಿಸುತ್ತಿದ್ದನು.
Kannada BSI Bible 2016
ಆಗ ದೇವರ ಮನು ಷ್ಯನು ಇಸ್ರಾಯೇಲಿನ ಅರಸನಿಗೆ--ಅಂಥಾ ಸ್ಥಳವನ್ನು ಹಾದು ಹೋಗದೆ ಜಾಗ್ರತೆಯಾಗಿ ಇರು; ಯಾಕಂದರೆ ಅರಾಮ್ಯರು ಅಲ್ಲಿಗೆ ಇಳಿದು ಬಂದಿದ್ದಾರೆಂದು ಹೇಳಿ ಕಳುಹಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ದೇವರ ಮನುಷ್ಯನು ಇಸ್ರಾಯೇಲ್ಯರ ಅರಸನಿಗೆ - ಜಾಗರೂಕತೆಯಿಂದಿರ್ರಿ; ನೀವು ಇಂಥಿಂಥ ಸ್ಥಳದಲ್ಲಿ ಹಾಯಬಾರದು, ಅಲ್ಲಿ ಅರಾಮ್ಯರು ಅಡಗಿಕೊಂಡಿದ್ದಾರೆ ಎಂದು ತಿಳಿಸುತ್ತಿದ್ದನು.
Kannada Bible (KNCL) BSI 2016
ಆದರೆ ದೈವಪುರುಷನು, ಪ್ರತೀಸಾರಿ ಇಸ್ರಯೇಲರ ಅರಸನಿಗೆ, “ಜಾಗರೂಕತೆಯಿಂದಿರಿ! ನೀವು ಇಂಥಿಂಥ ಸ್ಥಳದಲ್ಲಿ ಹಾಯಬಾರದು, ಅಲ್ಲಿ ಸಿರಿಯಾದವರು ಅಡಗಿಕೊಂಡಿದ್ದಾರೆ,” ಎಂದು ತಿಳಿಸುತ್ತಿದ್ದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ದೇವರ ಮನುಷ್ಯನು ಇಸ್ರಾಯೇಲಿನ ಅರಸನಿಗೆ, “ಅಂಥಾ ಸ್ಥಳವನ್ನು ಹಾದುಹೋಗದೆ ಜಾಗ್ರತೆಯಾಗಿ ಇರು. ಏಕೆಂದರೆ ಅರಾಮ್ಯರು ಅಲ್ಲಿಗೆ ಇಳಿದು ಬಂದಿದ್ದಾರೆ,” ಎಂದು ಹೇಳಿ ಕಳುಹಿಸಿದನು.