2 Kings 7:13 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ರಾಜನ ಅಧಿಕಾರಿಗಳಲ್ಲಿ ಒಬ್ಬನು, “ನಮ್ಮಲ್ಲಿ ಕೆಲವರು ನಗರದಲ್ಲಿ ಉಳಿದಿರುವ ಐದು ಕುದುರೆಗಳನ್ನು ತೆಗೆದುಕೊಳ್ಳೋಣ. ನಗರದಲ್ಲಿ ಉಳಿದಿರುವ ಇಸ್ರೇಲಿನ ಜನರಂತೆ ಹೇಗಾದರೂ ಈ ಕುದುರೆಗಳೂ ಬಹುಬೇಗ ಸತ್ತುಹೋಗುತ್ತವೆ. ಈ ಜನರನ್ನು ಕಳುಹಿಸಿ ಅಲ್ಲಿ ಏನು ನಡೆದಿದೆಯೆಂಬುದನ್ನು ನಾವು ತಿಳಿದುಕೊಳ್ಳೋಣ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಅವರಲ್ಲೊಬ್ಬನು ಅರಸನಿಗೆ, “ರಾಹುತರು ಪಟ್ಟಣದಲ್ಲಿ ಉಳಿದಿರುವ ಕುದುರೆಗಳಲ್ಲಿ ನಾಲ್ಕೈದು ಕುದುರೆಗಳನ್ನು ತೆಗೆದುಕೊಂಡು ನೋಡುವುದಕ್ಕೆ ಹೋಗಲಿ; ಅವರಿಗೆ ಪಟ್ಟಣದಲ್ಲಿ ಉಳಿದಿರುವ ಇಸ್ರಾಯೇಲರ ಗತಿಯಾಗಲಿ, ಸತ್ತುಹೋದವರ ಗತಿಯಾಗಲಿ, ಸಂಭವಿಸುವುದಷ್ಟೆ” ಎಂದು ಹೇಳಿದನು.
Kannada BSI Bible 2016
ಆಗ ಅವನ ಸೇವಕರಲ್ಲಿ ಒಬ್ಬನು --ಕುದುರೆಗಳಲ್ಲಿ ಐದು ಕುದುರೆಗಳನ್ನು ಕೆಲವರು ತಕ್ಕೊಂಡು ಹೋಗಲಿ; ಇಗೋ, ಅವು ಇಸ್ರಾಯೇಲಿನ ಎಲ್ಲಾ ಸಮೂಹದಲ್ಲಿ ಉಳಿದವುಗಳ ಹಾಗೆ ಅವೆ; ಅಂದರೆ ಇಗೋ, ಇಸ್ರಾಯೇಲಿನ ಎಲ್ಲಾ ಗುಂಪಿನಲ್ಲಿ ನಾಶವಾಗದೆ ಉಳಿದವುಗಳಂತಿವೆ; ನಾವು ಕಳುಹಿಸಿ ನೋಡೋಣ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಅವರಲ್ಲೊಬ್ಬನು ಅರಸನಿಗೆ - ರಾಹುತರು ಪಟ್ಟಣದಲ್ಲುಳಿದಿರುವ ಕುದುರೆಗಳಲ್ಲಿ ನಾಲ್ಕೈದು ಕುದುರೆಗಳನ್ನು ತೆಗೆದುಕೊಂಡು ನೋಡುವದಕ್ಕೆ ಹೋಗಲಿ; ಅವರಿಗೆ ಪಟ್ಟಣದಲ್ಲುಳಿದಿರುವ ಇಸ್ರಾಯೇಲ್ಯರ ಗತಿಯಾಗಲಿ ಸತ್ತುಹೋದವರ ಗತಿಯಾಗಲಿ ಸಂಭವಿಸುವದಷ್ಟೆ ಎಂದು ಹೇಳಿದನು.
Kannada Bible (KNCL) BSI 2016
ಆಗ ಅವರಲ್ಲೊಬ್ಬನು ಅರಸನಿಗೆ, “ರಾಹುತರು ಪಟ್ಟಣದಲ್ಲುಳಿದಿರುವ ಕುದುರೆಗಳಲ್ಲಿ ನಾಲ್ಕೈದು ಕುದುರೆಗಳನ್ನು ತೆಗೆದುಕೊಂಡು ನೋಡುವುದಕ್ಕೆ ಹೋಗಲಿ; ಅವರಿಗೆ ಪಟ್ಟಣದಲ್ಲಿ ಉಳಿದಿರುವ ಇಸ್ರಯೇಲರ ಗತಿಯಾಗಲಿ ಅಥವಾ ಸತ್ತುಹೋದವರ ಗತಿಯಾಗಲಿ ಸಂಬವಿಸುವದಷ್ಟೆ,” ಎಂದು ಹೇಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅವನ ಸೇವಕರಲ್ಲಿ ಒಬ್ಬನು ಉತ್ತರವಾಗಿ, “ಪಟ್ಟಣದಲ್ಲಿ ಉಳಿದಿರುವ ಕುದುರೆಗಳಲ್ಲಿ ಐದು ಕುದುರೆಗಳನ್ನು ಕೆಲವರು ತೆಗೆದುಕೊಂಡು ಹೋಗಲಿ. ಅವು ಇಸ್ರಾಯೇಲಿನ ಸಮಸ್ತ ಸಮೂಹದಲ್ಲಿ ಉಳಿದವುಗಳ ಹಾಗೆ ಇವೆ. ಅಂದರೆ ಇಸ್ರಾಯೇಲಿನ ಸಮಸ್ತ ಗುಂಪಿನಲ್ಲಿ ನಾಶವಾಗದೆ ಉಳಿದವುಗಳಂತಿವೆ, ನಾವು ಕಳುಹಿಸಿ ನೋಡೋಣ,” ಎಂದನು.