2 Kings 7:16 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಗ ಜನರು ಅರಾಮ್ಯರ ಪಾಳೆಯಕ್ಕೆ ಓಡುತ್ತಾ ಹೋಗಿ, ಅಲ್ಲಿನ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡರು. ಪ್ರತಿಯೊಬ್ಬರಿಗೂ ಹೇರಳವಾಗಿ ದೊರೆಯಿತು. ಯೆಹೋವನು ಹೇಳಿದಂತೆಯೇ ಇದಾಯಿತು. ಒಬ್ಬನು ಉತ್ತಮವಾದ ಒಂದು ಬುಟ್ಟಿ ಹಿಟ್ಟನ್ನು ಮತ್ತು ಎರಡು ಬುಟ್ಟಿ ಜವೆಗೋಧಿಯನ್ನು ಕೇವಲ ಒಂದು ರೂಪಾಯಿಗೆ ಕೊಳ್ಳಬಹುದಾಗಿತ್ತು!
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಜನರು ಹೊರಗೆ ಹೋಗಿ ಅರಾಮ್ಯರ ಪಾಳೆಯವನ್ನು ಸೂರೆಮಾಡಿಬಿಟ್ಟರು. ಯೆಹೋವನ ಮಾತಿನಂತೆ ಗೋದಿಹಿಟ್ಟು ರೂಪಾಯಿಗೆ ಹನ್ನೆರಡು ಸೇರಿನಂತೆಯೂ, ಜವೆಗೋದಿಯು ಇಪ್ಪತ್ತನಾಲ್ಕು ಸೇರಿನಂತೆಯೂ ಮಾರಲ್ಪಟ್ಟವು.
Kannada BSI Bible 2016
ಆಗ ಜನರು ಹೊರಟುಹೋಗಿ ಅರಾಮ್ಯರ ಡೇರೆಗಳನ್ನು ಸುಲುಕೊಂಡರು. ಆದದ ರಿಂದ ಕರ್ತನ ವಾಕ್ಯದ ಪ್ರಕಾರವೇ ಒಂದು ಸೇರು ನಯವಾದ ಹಿಟ್ಟು ಒಂದು ಶೇಕೆಲಿಗೂ ಎರಡು ಸೇರು ಜವೆಗೋದಿಯು ಒಂದು ಶೇಕೆಲಿಗೂ ಮಾರಲ್ಪಟ್ಟಿತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಜನರು ಹೊರಗೆ ಹೋಗಿ ಅರಾಮ್ಯರ ಪಾಳೆಯವನ್ನು ಸೂರೆಮಾಡಿಬಿಟ್ಟರು. ಯೆಹೋವನ ಮಾತಿನಂತೆ ಗೋದಿಹಿಟ್ಟು ರೂಪಾಯಿಗೆ ಹನ್ನೆರಡು ಸೇರಿನಂತೆಯೂ ಜವೆಗೋದಿಯು ಇಪ್ಪತ್ತನಾಲ್ಕು ಸೇರಿನಂತೆಯೂ ಮಾರಲ್ಪಟ್ಟವು.
Kannada Bible (KNCL) BSI 2016
ಆಗ ಜನರು ಹೊರಗೆ ಹೋಗಿ, ಸಿರಿಯಾದವರ ಪಾಳೆಯವನ್ನು ಸೂರೆಮಾಡಿಬಿಟ್ಟರು. ಸರ್ವೇಶ್ವರನ ಮಾತಿನಂತೆ ಗೋದಿಹಿಟ್ಟು ನಾಣ್ಯಕ್ಕೆ ಮೂರು ಕಿಲೋಗ್ರಾಂನಂತೆಯೂ ಜವೆಗೋದಿಯು ನಾಣ್ಯಕ್ಕೆ ಆರು ಕಿಲೋಗ್ರಾಂನಂತೆಯೂ ಮಾರಲಾಗುತ್ತಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಜನರು ಹೊರಟುಹೋಗಿ ಅರಾಮ್ಯರ ಡೇರೆಗಳನ್ನು ಸುಲಿದುಕೊಂಡರು. ಆದ್ದರಿಂದ ಯೆಹೋವ ದೇವರ ವಾಕ್ಯದ ಪ್ರಕಾರವೇ ಮೂರು ಕಿಲೋಗ್ರಾಂ ನಯವಾದ ಗೋಧಿಹಿಟ್ಟು ಒಂದು ಬೆಳ್ಳಿ ನಾಣ್ಯಕ್ಕೂ, ಆರು ಕಿಲೋಗ್ರಾಂ ಜವೆಗೋಧಿಯು ಒಂದು ಬೆಳ್ಳಿ ನಾಣ್ಯಕ್ಕೂ ಮಾರಲಾಯಿತು.