2 Kings 7:19 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದರೆ ಆ ಅಧಿಕಾರಿಯು ದೇವಮನುಷ್ಯನಿಗೆ, “ಯೆಹೋವನು ಪರಲೋಕಕ್ಕೆ ಕಿಟಿಕಿಗಳನ್ನು ಮಾಡಿಸಿದರೂ ಇದು ಸಂಭವಿಸುವುದಿಲ್ಲ!” ಎಂದು ಉತ್ತರಿಸಿದನು. ಎಲೀಷನು ಆ ಅಧಿಕಾರಿಗೆ, “ನೀನು ನಿನ್ನ ಸ್ವಂತ ಕಣ್ಣುಗಳಿಂದಲೇ ಇದನ್ನು ನೋಡುವೆ. ಆದರೆ ಆ ಆಹಾರದಲ್ಲಿ ಯಾವುದನ್ನೂ ನೀನು ತಿನ್ನುವುದಿಲ್ಲ” ಎಂದು ಹೇಳಿದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಸರದಾರನು ದೇವರ ಮನುಷ್ಯನಿಗೆ, “ಯೆಹೋವನು ಆಕಾಶದಲ್ಲಿ ಕಿಂಡಿಗಳನ್ನು ಕೊರೆದರೂ, ಇದು ಸಂಭವಿಸಲು ಸಾಧ್ಯವಿಲ್ಲ?” ಎಂದು ಹೇಳಿದ್ದನು. ಆಗ ದೇವರ ಮನುಷ್ಯನಾದ ಎಲೀಷನು ಅವನಿಗೆ, “ನೀನು, ಅದನ್ನು ಕಣ್ಣಾರೆ ಕಾಣುವಿ, ಆದರೆ ಅದನ್ನು ಅನುಭವಿಸುವುದಿಲ್ಲ” ಎಂದು ನುಡಿದಿದ್ದನು.
Kannada BSI Bible 2016
ಆ ಅಧಿಕಾರಿ ದೇವರ ಮನುಷ್ಯನಿಗೆ ಪ್ರತ್ಯುತ್ತರವಾಗಿ--ಇಗೋ, ಕರ್ತನು ಆಕಾಶದಲ್ಲಿ ಕಿಟಕಿಗಳನ್ನು ಉಂಟುಮಾಡಿದರೂ ಹಾಗಾ ಗುವದೋ ಅಂದನು; ಅದಕ್ಕವನು--ಇಗೋ, ನೀನು ನಿನ್ನ ಕಣ್ಣುಗಳಿಂದ ನೋಡುವಿ; ಆದರೆ ಅದನ್ನು ತಿನ್ನು ವದಿಲ್ಲ ಎಂದು ಹೇಳಿದ್ದನು.ಆ ಪ್ರಕಾರವೇ ಅವನಿಗೆ ಸಂಭವಿಸಿತು; ಏನಂದರೆ ಬಾಗಲಲ್ಲಿ ಜನರು ಅವನನ್ನು ತುಳಿದಿದ್ದರಿಂದ ಅವನು ಸತ್ತನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನು ಆಕಾಶದಲ್ಲಿ ದ್ವಾರಗಳನ್ನು ಮಾಡಿದರೂ ಇದು ಸಂಭವಿಸಲಾರದು ಅಂದದರಿಂದ ದೇವರ ಮನುಷ್ಯನು ಅವನಿಗೆ - ನೀನು ಅದನ್ನು ಕಣ್ಣಾರೆ ಕಾಣುವಿ; ಆದರೆ ಅನುಭವಿಸುವದಿಲ್ಲ ಎಂದು ನುಡಿದಿದ್ದನು.
Kannada Bible (KNCL) BSI 2016
ಆ ಸರದಾರನು, “ಸರ್ವೇಶ್ವರ ಆಕಾಶದಲ್ಲಿ ದ್ವಾರಗಳನ್ನು ಮಾಡಿದರೂ ಇದು ಸಂಭವಿಸಲಾರದು,” ಎಂದದ್ದರಿಂದ ದೈವಪುರುಷನು ಅವನಿಗೆ, “ನೀನು ಅದನ್ನು ಕಣ್ಣಾರೆ ಕಾಣುವೆ; ಆದರೆ ಅದನ್ನು ಅನುಭವಿಸಲಾರೆ,” ಎಂದು ನುಡಿದಿದ್ದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ಅಧಿಕಾರಿ ದೇವರ ಮನುಷ್ಯನಿಗೆ ಉತ್ತರವಾಗಿ, “ಇಗೋ, ಯೆಹೋವ ದೇವರು ಆಕಾಶದಲ್ಲಿ ಕಿಟಕಿಗಳನ್ನು ಉಂಟುಮಾಡಿದರೂ, ಸಂಭವಿಸುವುದೋ?” ಎಂದು ನುಡಿದಿದ್ದನು. ಅದಕ್ಕವನು, “ಇಗೋ, ನೀನು ನಿನ್ನ ಕಣ್ಣುಗಳಿಂದ ನೋಡುವೆ, ಆದರೆ ನೀನು ಅದನ್ನು ತಿನ್ನುವುದಿಲ್ಲ,” ಎಂದು ಪ್ರವಾದಿಯು ಹೇಳಿದ್ದನು.