2 Kings 7:9 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಗ ಆ ಕುಷ್ಠರೋಗಿಗಳು, “ನಾವು ತಪ್ಪು ಮಾಡುತ್ತಿದ್ದೇವೆ! ಈ ದಿನ ನಮಗೆ ಶುಭವಾರ್ತೆ ಸಿಕ್ಕಿದೆ. ಆದರೆ ನಾವು ನಿಶಬ್ಧದಿಂದ ಇದ್ದೇವೆ. ಸೂರ್ಯನು ಮೇಲಕ್ಕೇರಿ ಬರುವವರೆಗೆ ನಾವು ಸುಮ್ಮನಿದ್ದರೆ ನಮ್ಮನ್ನು ದಂಡಿಸಲಾಗುವುದು. ಈಗ ನಾವು ರಾಜನ ಮನೆಗೆ ಹೋಗಿ ಅಲ್ಲಿ ವಾಸಿಸುವ ಜನರಿಗೆ ಇದನ್ನು ತಿಳಿಸೋಣ” ಎಂದು ಮಾತನಾಡಿಕೊಂಡರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅನಂತರ ಅವರು, “ಇದು ಶುಭವಾರ್ತೆಯ ದಿನವಾಗಿದೆ. ನಾವು ಇದನ್ನು ಪ್ರಕಟಿಸದಿರುವುದು ಒಳ್ಳೇಯದಲ್ಲ. ಬೆಳಗಾಗುವವರೆಗೆ ತಡಮಾಡಿದರೆ ಶಿಕ್ಷೆಗೆ ಪಾತ್ರರಾದೇವು. ಆದುದರಿಂದ ಹೋಗಿ ಅರಸನಿಗೆ ಈ ಸಂಗತಿ ತಿಳಿಸೋಣ” ಎಂದು ಮಾತನಾಡಿಕೊಂಡು ಅಲ್ಲಿಂದ ಹೊರಟರು.
Kannada BSI Bible 2016
ಆಗ ಅವರು ಒಬ್ಬರಿಗೊಬ್ಬರು -- ನಾವು ಮಾಡಿದ್ದು ಒಳ್ಳೇದಲ್ಲ; ಈ ದಿವಸ ಒಳ್ಳೇ ಸಮಾಚಾರದ ದಿವಸ; ನಾವು ಸುಮ್ಮನೆ ಇದ್ದು ಉದಯವಾಗುವ ವರೆಗೆ ತಡೆದರೆ ಶಿಕ್ಷೆಯನ್ನು ಹೊಂದುವೆವು; ಆದಕಾರಣ ಬನ್ನಿರಿ ನಾವು ಹೋಗಿ ಅರಸನ ಮನೆಯವರಿಗೆ ತಿಳಿಸೋಣ ಎಂದು ಮಾತಾಡಿಕೊಂಡರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅನಂತರ ಅವರು - ಇದು ಶುಭವಾರ್ತೆಯ ದಿವಸವಾಗಿದೆ; ನಾವು ಇದನ್ನು ಪ್ರಕಟಿಸದಿರುವದು ಒಳ್ಳೇದಲ್ಲ. ಬೆಳಗಾಗುವವರೆಗೆ ತಡಮಾಡಿದರೆ ಶಿಕ್ಷೆಗೆ ಪಾತ್ರರಾದೇವು. ಆದದರಿಂದ ಹೋಗಿ ಅರಮನೆಯವರಿಗೆ ಈ ಸಂಗತಿಯನ್ನು ತಿಳಿಸೋಣ ಎಂದು ಮಾತಾಡಿಕೊಂಡು
Kannada Bible (KNCL) BSI 2016
ಅನಂತರ ಅವರು, “ಇದು ಶುಭವಾರ್ತೆಯ ದಿವಸ; ನಾವು ಇದನ್ನು ಪ್ರಕಟಿಸದಿರುವುದು ಒಳ್ಳೆಯದಲ್ಲ. ಬೆಳಗಾಗುವವರೆಗೆ ತಡಮಾಡಿದರೆ ಶಿಕ್ಷೆಗೆ ಪಾತ್ರರಾಗಬಹುದು. ಆದುದರಿಂದ ಹೋಗಿ ಅರಮನೆಯವರಿಗೆ ಈ ಸಂಗತಿಯನ್ನು ತಿಳಿಸೋಣ,” ಎಂದು ಮಾತಾಡಿಕೊಂಡರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅನಂತರ ಅವರು, “ಇದು ಶುಭವಾರ್ತೆಯ ದಿವಸ, ನಾವು ಇದನ್ನು ಪ್ರಕಟಿಸದಿರುವುದು ಒಳ್ಳೆಯದಲ್ಲ. ಬೆಳಗಾಗುವವರೆಗೆ ತಡಮಾಡಿದರೆ, ಶಿಕ್ಷೆಗೆ ಪಾತ್ರರಾಗಬಹುದು. ಆದ್ದರಿಂದ ಹೋಗಿ ಅರಮನೆಯವರಿಗೆ ಈ ಸಂಗತಿಯನ್ನು ತಿಳಿಸೋಣ,” ಎಂದು ಮಾತನಾಡಿಕೊಂಡರು.