2 Kings 8:12 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಹಜಾಯೇಲನು, “ಸ್ವಾಮೀ, ನೀವು ಅಳುವುದೇಕೇ?” ಎಂದು ಕೇಳಿದನು. ಎಲೀಷನು, “ನಾನು ಅಳುತ್ತಿರುವುದೇಕೆಂದರೆ ನೀನು ಇಸ್ರೇಲರಿಗೆ ಮಾಡುವ ಕೆಟ್ಟಕಾರ್ಯಗಳು ನನಗೆ ತಿಳಿದಿವೆ. ನೀನು ಅವರ ನಗರಗಳ ಕೋಟೆಗಳನ್ನು ಸುಟ್ಟುಹಾಕುವೆ. ನೀನು ಅವರ ತರುಣರನ್ನು ಖಡ್ಗಗಳಿಂದ ಇರಿದುಕೊಲ್ಲುವೆ. ನೀನು ಅವರ ಮಕ್ಕಳನ್ನು ಕೊಂದುಹಾಕುವೆ. ನೀನು ಅವರ ಗರ್ಭಿಣಿ ಸ್ತ್ರೀಯರನ್ನು ಸೀಳಿಹಾಕುವೆ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹಜಾಯೇಲನು ಅವನನ್ನು, “ನನ್ನ ಒಡೆಯಾ, ಯಾಕೆ ಅಳುತ್ತಿ?” ಎಂದು ಕೇಳಿದನು. ಅದಕ್ಕೆ ಅವನು, “ನೀನು ಇಸ್ರಾಯೇಲರಿಗೆ ಎಷ್ಟು ಕೇಡು ಮಾಡುವಿ ಎಂಬುದು ನನಗೆ ಪ್ರಕಟವಾಯಿತು. ನೀನು ಅವರ ಕೋಟೆಗಳಿಗೆ ಬೆಂಕಿ ಹೊತ್ತಿಸುವಿ. ಯೌವನಸ್ಥರನ್ನು ಕತ್ತಿಯಿಂದ ಸಂಹರಿಸುವಿ. ಮಕ್ಕಳನ್ನು ಬಂಡೆಗೆ ಅಪ್ಪಳಿಸುವಿ. ಗರ್ಭಿಣಿಯರ ಹೊಟ್ಟೆಯನ್ನು ಸೀಳುವಿ” ಎಂದು ಉತ್ತರಕೊಟ್ಟನು.
Kannada BSI Bible 2016
ಆಗ ಹಜಾಯೇ ಲನು--ನನ್ನ ಒಡೆಯನು ಅಳುವದೇನು ಅಂದನು.ಅದಕ್ಕವನು -- ಇಸ್ರಾಯೇಲ್ ಮಕ್ಕಳಿಗೆ ನೀನು ಮಾಡಲು ಹೋಗುವ ಕೇಡು ನನಗೆ ತಿಳಿದದೆ; ನೀನು ಅವರ ಕೋಟೆಗಳಿಗೆ ಬೆಂಕಿ ಹೊತ್ತಿಸಿ ಅವರ ಯೌವನ ಸ್ಥರನ್ನು ಕತ್ತಿಯಿಂದ ಕೊಂದು ಅವರ ಕೂಸುಗಳನ್ನು ಅಪ್ಪಳಿಸಿ ಅವರ ಗರ್ಭಿಣೀ ಸ್ತ್ರೀಯರನ್ನು ಸೀಳಿಬಿಡುವಿ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಹಜಾಯೇಲನು ಅವನನ್ನು - ನನ್ನ ಒಡೆಯಾ, ಯಾಕೆ ಅಳುತ್ತೀ ಎಂದು ಕೇಳಿದನು. ಅದಕ್ಕೆ ಅವನು - ನೀನು ಇಸ್ರಾಯೇಲ್ಯರಿಗೆ ಎಷ್ಟು ಕೇಡು ಮಾಡುವಿಯೆಂಬದು ನನಗೆ ಪ್ರಕಟವಾಯಿತು. ನೀನು ಅವರ ಕೋಟೆಗಳಿಗೆ ಬೆಂಕಿ ಹೊತ್ತಿಸುವಿ; ಯೌವನಸ್ಥರನ್ನು ಕತ್ತಿಯಿಂದ ಸಂಹರಿಸುವಿ; ಮಕ್ಕಳನ್ನು ಬಂಡೆಗೆ ಅಪ್ಪಳಿಸುವಿ; ಗರ್ಭಿಣಿಯರ ಹೊಟ್ಟೆಯನ್ನು ಸೀಳುವಿ ಎಂದು ಉತ್ತರ ಕೊಟ್ಟನು.
Kannada Bible (KNCL) BSI 2016
ಹಜಾಯೇಲನು, “ನನ್ನೊಡೆಯಾ, ಏಕೆ ಅಳುತ್ತೀರಿ?” ಎಂದು ಕೇಳಿದನು. ಅದಕ್ಕೆ ಅವನು, “ನೀನು ಇಸ್ರಯೇಲರಿಗೆ ಎಷ್ಟು ಕೇಡು ಮಾಡುವೆಯೆಂಬುದು ನನಗೆ ಪ್ರಕಟವಾಯಿತು. ನೀನು ಅವರ ಕೋಣೆಗಳಿಗೆ ಬೆಂಕಿ ಹೊತ್ತಿಸುವೆ; ಯೌವನಸ್ಥರನ್ನು ಕತ್ತಿಯಿಂದ ಸಂಹರಿಸುವೆ; ಮಕ್ಕಳನ್ನು ಬಂಡೆಗೆ ಅಪ್ಪಳಿಸುವೆ; ಗರ್ಭಿಣಿಯರ ಹೊಟ್ಟೆಯನ್ನು ಸೀಳುವೆ,” ಎಂದು ಉತ್ತರಕೊಟ್ಟನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಹಜಾಯೇಲನು, “ನನ್ನ ಒಡೆಯನು ಅಳುವುದೇಕೆ?” ಎಂದನು. ಅದಕ್ಕವನು, “ಏಕೆಂದರೆ ಇಸ್ರಾಯೇಲರಿಗೆ ನೀನು ಮಾಡಲು ಹೋಗುವ ಕೇಡು ನನಗೆ ತಿಳಿದದೆ. ನೀನು ಅವರ ಕೋಟೆಗಳಿಗೆ ಬೆಂಕಿ ಹತ್ತಿಸಿ, ಅವರ ಯೌವನಸ್ಥರನ್ನು ಖಡ್ಗದಿಂದ ಕೊಂದು, ಅವರ ಕೂಸುಗಳನ್ನು ತುಂಡು ತುಂಡುಗಳಾಗಿ ಮಾಡಿ, ಅವರ ಗರ್ಭಿಣಿ ಸ್ತ್ರೀಯರನ್ನು ಸೀಳಿಬಿಡುವೆ,” ಎಂದ ಉತ್ತರಕೊಟ್ಟನು.