2 Kings 8:3 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಏಳು ವರ್ಷಗಳು ಮುಗಿದ ನಂತರ ಆ ಸ್ತ್ರೀಯು ಫಿಲಿಷ್ಟಿಯರ ದೇಶದಿಂದ ಹಿಂದಿರುಗಿ ಬಂದಳು. ಆ ಸ್ತ್ರೀಯು ತನ್ನ ಮನೆಯನ್ನು ಮತ್ತು ಭೂಮಿಯನ್ನು ತನಗೆ ಮತ್ತೆ ಕೊಡಿಸುವಂತೆ ಕೇಳಲು ರಾಜನ ಬಳಿಗೆ ಹೋದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಏಳು ವರ್ಷಗಳಾದ ನಂತರ ಆಕೆಯು ಫಿಲಿಷ್ಟಿಯರ ದೇಶದಿಂದ ಸ್ವದೇಶಕ್ಕೆ ಬಂದು, ಪರಾಧೀನವಾಗಿದ್ದ ತನ್ನ ಹೊಲಮನೆಗಳಿಗಾಗಿ ಮೊರೆಯಿಡುವುದಕ್ಕೋಸ್ಕರ ಅರಸನ ಬಳಿಗೆ ಹೋದಳು.
Kannada BSI Bible 2016
ಏಳು ವರುಷದ ತರುವಾಯ ಏನಾಯಿತಂದರೆ, ಆ ಸ್ತ್ರೀಯು ಫಿಲಿಷ್ಟಿಯರ ದೇಶವನ್ನು ಬಿಟ್ಟು ತಿರಿಗಿ ಬಂದು ತನ್ನ ಮನೆಗೋಸ್ಕರವೂ ಹೊಲಕ್ಕೋಸ್ಕರವೂ ಅರಸನಿಗೆ ಮೊರೆಯಿಟ್ಟಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಏಳು ವರುಷಗಳಾದನಂತರ ಆಕೆಯು ಅಲ್ಲಿಂದ ಸ್ವದೇಶಕ್ಕೆ ಬಂದು ಪರಾಧೀನವಾಗಿದ್ದ ತನ್ನ ಹೊಲಮನೆಗಳಿಗಾಗಿ ಮೊರೆಯಿಡುವದಕ್ಕೋಸ್ಕರ ಅರಸನ ಬಳಿಗೆ ಹೋದಳು.
Kannada Bible (KNCL) BSI 2016
ಏಳು ವರ್ಷಗಳಾದನಂತರ ಆಕೆ ಅಲ್ಲಿಂದ ಸ್ವಂತ ನಾಡಿಗೆ ಬಂದು, ಪರರ ಕೈವಶವಾಗಿದ್ದ ತನ್ನ ಹೊಲಮನೆಗಳಿಗಾಗಿ ಮೊರೆಯಿಡಲು ಅರಸನ ಬಳಿಗೆ ಬಂದಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಏಳು ವರ್ಷ ಆದ ತರುವಾಯ, ಆ ಸ್ತ್ರೀಯು ಫಿಲಿಷ್ಟಿಯರ ದೇಶವನ್ನು ಬಿಟ್ಟು ತಿರುಗಿಬಂದು ತನ್ನ ಹೊಲಮನೆಗಳಿಗೋಸ್ಕರ ಅರಸನಿಗೆ ಮೊರೆಯಿಟ್ಟಳು.