2 Kings 9:10 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಇಜ್ರೇಲಿನ ಪ್ರದೇಶದಲ್ಲಿ ಈಜೆಬೆಲಳನ್ನು ನಾಯಿಗಳು ಕಿತ್ತುತಿನ್ನುತ್ತವೆ. ಈಜೆಬೆಲಳನ್ನು ಸಮಾಧಿಮಾಡುವುದಿಲ್ಲ” ಎಂದು ಹೇಳಿದನು. ಬಳಿಕ ಯುವಪ್ರವಾದಿಯು ಬಾಗಿಲನ್ನು ತೆರೆದು ಓಡಿಹೋದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಈಜೆಬೆಲಳ ಶವವು ಸಮಾಧಿಯನ್ನು ಸೇರುವುದಿಲ್ಲ. ನಾಯಿಗಳು ಅವಳ ಹೆಣವನ್ನು ಇಜ್ರೇಲಿನ ಹೊಲದಲ್ಲಿ ತಿಂದುಬಿಡುವವು’” ಎನ್ನುತ್ತಾನೆ ಎಂದು ಹೇಳಿ ಬಾಗಿಲನ್ನು ತೆರೆದು ಓಡಿಹೋದನು.
Kannada BSI Bible 2016
ಇದಲ್ಲದೆ ಇಜ್ರೇಲಿನ ಪಾಲಿನಲ್ಲಿ ನಾಯಿಗಳು ಈಜೆಬೆಲಳನ್ನು ತಿನ್ನುವವು; ಅವಳನ್ನು ಹೂಣಿಡಲು ಯಾವನೂ ಇರುವದಿಲ್ಲ ಎಂದು ಹೇಳಿ ಬಾಗಲನ್ನು ತೆರೆದು ಓಡಿಹೋದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಈಜೆಬೆಲಳ ಶವವು ಸಮಾಧಿಯನ್ನು ಸೇರುವದಿಲ್ಲ; ನಾಯಿಗಳು ಅದನ್ನು ಇಜ್ರೇಲಿನ ಹೊಲದಲ್ಲಿ ತಿಂದುಬಿಡುವವು ಅನ್ನುತ್ತಾನೆ ಎಂದು ಹೇಳಿ ಕದತೆರೆದು ಓಡಿಹೋದನು.
Kannada Bible (KNCL) BSI 2016
ಈಜೆಬೆಲಳ ಶವವು ಸಮಾಧಿಯನ್ನು ಸೇರುವುದಿಲ್ಲ; ನಾಯಿಗಳು ಅದನ್ನು ಜೆಸ್ರೀಲಿನ ಹೊಲದಲ್ಲಿ ತಿಂದುಬಿಡುವುವು;’ ಎನ್ನುತ್ತಾರೆ,” ಎಂದು ಹೇಳಿ ಬಾಗಿಲು ತೆರೆದು ಓಡಿಹೋದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಇಜ್ರೆಯೇಲ್ ಊರಿನ ಹೊಲದಲ್ಲಿ ನಾಯಿಗಳು ಈಜೆಬೆಲಳನ್ನು ತಿಂದುಬಿಡುವುವು; ಅವಳ ಶವವನ್ನು ಸಮಾಧಿಮಾಡಲು ಯಾವನೂ ಇರುವುದಿಲ್ಲ,” ಎಂದು ಹೇಳಿ ಬಾಗಿಲನ್ನು ತೆರೆದು ಓಡಿಹೋದನು.