2 Kings 9:13 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಗ ಪ್ರತಿಯೊಬ್ಬ ಅಧಿಕಾರಿಯೂ ತಮ್ಮತಮ್ಮ ನಿಲುವಂಗಿಗಳನ್ನು ತೆಗೆದು, ಅವುಗಳನ್ನು ಮೆಟ್ಟಿಲುಗಳ ಮೇಲೆ, ಯೇಹುವಿನ ಮುಂದೆ ಇಟ್ಟರು. ಅನಂತರ ಅವರು ತುತ್ತೂರಿಯನ್ನೂದಿ, “ಯೇಹು ರಾಜನು!” ಎಂದು ಘೋಷಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕೂಡಲೆ ಅವರು ಅವನಿಗೋಸ್ಕರ ಮೆಟ್ಟಿಲುಗಳ ಮೇಲೆ ತಮ್ಮ ಬಟ್ಟೆಗಳನ್ನು ಹಾಸಿ ತುತ್ತೂರಿಯನ್ನು ಊದಿಸಿ ಯೇಹುವು ಅರಸನಾಗಿದ್ದಾನೆಂದು ಘೋಷಣೆಗಳನ್ನು ಕೂಗಿದರು.
Kannada BSI Bible 2016
ಆಗ ಅವರು ತ್ವರೆ ಪಟ್ಟು ಪ್ರತಿಯೊಬ್ಬನು ತನ್ನ ವಸ್ತ್ರವನ್ನು ತೆಗೆದು ಮೆಟ್ಟಲುಗಳ ಮೇಲೆ ಹಾಸಿ ಇವನನ್ನು ಕುಳ್ಳಿರಿಸಿ ತುತೂರಿಗಳನ್ನು ಊದಿ -- ಯೇಹುವು ಅರಸನಾಗಿ ದ್ದಾನೆಂದು ಹೇಳಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕೂಡಲೆ ಅವರು ಅವನಿಗೋಸ್ಕರ ಮೆಟ್ಲುಗಳ ಮೇಲೆ ತಮ್ಮ ಬಟ್ಟೆಗಳನ್ನು ಹಾಸಿ ತುತೂರಿಯನ್ನು ಊದಿಸಿ ಯೇಹುವು ಅರಸನಾಗಿದ್ದಾನೆಂದು ಆರ್ಭಟಿಸಿದರು.
Kannada Bible (KNCL) BSI 2016
ಕೂಡಲೆ ಅವರು ಅವನಿಗಾಗಿ ಮೆಟ್ಟಲುಗಳ ಮೇಲೆ ತಮ್ಮ ಬಟ್ಟೆಗಳನ್ನು ಹಾಸಿ, ತುತೂರಿಯನ್ನು ಊದಿಸಿ, “ಯೇಹುವು ಅರಸನಾಗಿದ್ದಾನೆ,” ಎಂದು ಆರ್ಭಟಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅವರು ತ್ವರೆಪಟ್ಟು ಪ್ರತಿಯೊಬ್ಬರು ತಮ್ಮ ಹೊರ ಉಡುಪುಗಳನ್ನು ತೆಗೆದು, ಮೆಟ್ಟಿಲುಗಳ ಮೇಲೆ ಹಾಸಿ, ಇವನನ್ನು ಕುಳ್ಳಿರಿಸಿ, ತುತೂರಿಗಳನ್ನು ಊದಿ, “ಯೇಹುವು ಅರಸನಾಗಿದ್ದಾನೆ,” ಎಂದು ಆರ್ಭಟಿಸಿದರು.