2 Kings 9:18 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೇಹುವನ್ನು ಸಂಧಿಸಲು ಒಬ್ಬನು ಕುದುರೆಯ ಮೇಲೆ ಹೋಗಿ, “ರಾಜನಾದ ಯೋರಾವುನು ‘ಶುಭವಾರ್ತೆಯುಂಟೋ?’ ಎಂದು ಕೇಳುತ್ತಾನೆ” ಅಂದನು. ಯೇಹುವು, “ನಮ್ಮ ಶುಭದಿಂದ ನೀನು ಮಾಡುವುದೇನಿದೆ! ಬಾ, ನನ್ನನ್ನು ಹಿಂಬಾಲಿಸು” ಎಂದು ಹೇಳಿದನು. ಕಾವಲುಗಾರನು ಯೋರಾವುನಿಗೆ, “ಆ ಗುಂಪಿನ ಬಳಿಗೆ ಹೋದ ಸಂದೇಶಕನು, ಈವರೆವಿಗೂ ಹಿಂದಿರುಗಿ ಬರಲೇ ಇಲ್ಲ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ರಾಹುತನು ಯೇಹುವನ್ನು ಎದುರುಗೊಂಡು, “ಅರಸನು ಶುಭವಾರ್ತೆಯುಂಟೋ? ಎಂದು ಕೇಳುತ್ತಾನೆ” ಎನ್ನಲು ಅವನು, “ಶುಭವಾರ್ತೆಯಿಂದ ನಿನಗೇನಾಗಬೇಕು ನೀನು ನನ್ನ ಹಿಂದೆ ಬಾ” ಎಂದು ಹೇಳಿದನು. ಕಾವಲುಗಾರನು ಅರಸನಿಗೆ, “ರಾಹುತನು ಆ ಗುಂಪನ್ನು ತಲುಪಿದ್ದಾನೆ. ಆದರೆ ಹಿಂತಿರುಗಿ ಬರುವುದು ಕಾಣಿಸುತ್ತಿಲ್ಲ” ಎಂದು ತಿಳಿಸಿದಾಗ ಅರಸನು ಇನ್ನೊಬ್ಬ ರಾಹುತನನ್ನು ಕಳುಹಿಸಿದನು.
Kannada BSI Bible 2016
ಆದದರಿಂದ ಒಬ್ಬನು ಕುದುರೆಯನ್ನು ಹತ್ತಿ ಅವನಿಗೆ ಎದುರಾಗಿ ಹೋಗಿ--ಸಮಾಧಾನವೋ ಎಂದು ಅರಸನು ಕೇಳು ತ್ತಾನೆ ಅಂದನು. ಅದಕ್ಕೆ ಯೇಹುವು--ಸಮಾಧಾನ ನಿನಗೆ ಏನು? ನನ್ನ ಹಿಂದಕ್ಕೆ ಹೋಗು ಅಂದನು. ಆಗ ಕಾವಲುಗಾರನು -- ಸೇವಕನು ಅವರ ಬಳಿಗೆ ಹೋಗಿ ತಿರಿಗಿ ಬರಲಿಲ್ಲ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ರಾಹುತನು ಯೇಹುವನ್ನು ಎದುರುಗೊಂಡು - ಅರಸನು ಶುಭವಾರ್ತೆಯುಂಟೋ ಎಂದು ಕೇಳುತ್ತಾನೆ ಅನ್ನಲು ಅವನು - ಶುಭವಾರ್ತೆ ನಿನಗೇನು? ನನ್ನ ಹಿಂದೆ ಬಾ ಎಂದು ಹೇಳಿದನು. ಕಾವಲುಗಾರನು ಅರಸನಿಗೆ - ರಾಹುತನು ಆ ಗುಂಪನ್ನು ಮುಟ್ಟಿದನು; ಆದರೆ ತಿರಿಗಿ ಬರುವದು ಕಾಣಿಸುವದಿಲ್ಲ ಎಂದು ತಿಳಿಸಿದಾಗ ಅರಸನು ಇನ್ನೊಬ್ಬ ರಾಹುತನನ್ನು ಕಳುಹಿಸಿದನು.
Kannada Bible (KNCL) BSI 2016
ರಾಹುತನು ಯೇಹುವನ್ನು ಎದುರುಗೊಂಡು, “ಅರಸರು ‘ಶುಭವಾರ್ತೆಯುಂಟೊ?’ ಎಂದು ಕೇಳುತ್ತಾರೆ,” ಎನ್ನಲು ಅವನು, “ಶುಭವಾರ್ತೆಯಿಂದ ನಿನಗೇನು? ನನ್ನ ಹಿಂದೆ ಬಾ,” ಎಂದನು. ಕಾವಲುಗಾರನು ಅರಸನಿಗೆ, “ರಾಹುತನು ಆ ಗುಂಪನ್ನು ಮುಟ್ಟಿದನು; ಆದರೆ ತಿರುಗಿಬರುವುದು ಕಾಣಿಸುವುದಿಲ್ಲ,” ಎಂದು ತಿಳಿಸಿದಾಗ ಅರಸನು ಇನ್ನೊಬ್ಬ ರಾಹುತನನ್ನು ಕಳುಹಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಒಬ್ಬ ರಾಹುತನು ಯೇಹುವನ್ನು ಎದುರುಗೊಂಡು, “ಅರಸನು, ‘ಶುಭವಾರ್ತೆ ಉಂಟೋ?’ ಎಂದು ಕೇಳುತ್ತಾನೆ,” ಎನ್ನಲು ಅವನು, “ಶುಭವಾರ್ತೆಯಿಂದ ನಿನಗೇನು? ನನ್ನ ಹಿಂದೆ ಬಾ,” ಎಂದನು. ಕಾವಲುಗಾರನು ಅರಸನಿಗೆ, “ರಾಹುತನು ಆ ಗುಂಪನ್ನು ಮುಟ್ಟಿದನು, ಆದರೆ ತಿರುಗಿ ಬರುವುದು ಕಾಣಿಸುವುದಿಲ್ಲ,” ಎಂದು ತಿಳಿಸಿದನು.