2 Kings 9:2 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನೀನು ಅಲ್ಲಿಗೆ ಹೋದಾಗ ಯೆಹೋಷಾಫಾಟನ ಮಗನಾದ ಯೇಹುವನ್ನು ಕಂಡುಹಿಡಿ. ಯೆಹೋಷಾಫಾಟನು ನಿಂಷಿಯ ಮಗ. ಅಲ್ಲಿಗೆ ಹೋಗಿ ಅವನನ್ನು ಅವನ ಸೋದರರ ಮಧ್ಯದಿಂದ ಮೇಲಕ್ಕೆಬ್ಬಿಸಿ ಒಂದು ಒಳಕೋಣೆಗೆ ಕರೆದುಕೊಂಡು ಹೋಗು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಊರನ್ನು ತಲುಪಿದ ನಂತರ ನಿಂಷಿಯ ಮೊಮ್ಮಗನೂ, ಯೆಹೋಷಾಫಾಟನ ಮಗನೂ ಆದ ಯೇಹುವು ಎಲ್ಲಿರುತ್ತಾನೆಂದು ವಿಚಾರಿಸಿ, ಅವನು ಸಿಕ್ಕಿದಾಗ ಅವನನ್ನು ಅವರ ಜೊತೆಗಾರರ ಗುಂಪಿನಿಂದ ಒಳಗಿನ ಕೋಣೆಗೆ ಕರೆದುಕೊಂಡು ಹೋಗು.
Kannada BSI Bible 2016
ನೀನು ಅಲ್ಲಿಗೆ ಸೇರಿದಾಗ ನಿಂಷಿಯ ಮಗನಾಗಿರುವ ಯೆಹೋಷಾಫಾಟನ ಮಗ ನಾದ ಯೇಹುವನ್ನು ಅಲ್ಲಿ ನೋಡಿ ಒಳಗೆ ಹೋಗಿ ಅವನನ್ನು ತನ್ನ ಸಹೋದರರ ಮಧ್ಯದಿಂದ ಏಳ ಮಾಡಿ ಒಳಗಿನ ಕೊಠಡಿಗೆ ಕರಕೊಂಡು ಹೋಗಿ ಎಣ್ಣೆಯ ಪಾತ್ರೆಯನ್ನು ತಕ್ಕೊಂಡು ಅವನ ತಲೆಯ ಮೇಲೆ ಹೊಯ್ದು
Kannada BSI JV (ಕನ್ನಡ ಸತ್ಯವೇದವು J.V. (BSI))
ಊರನ್ನು ಮುಟ್ಟಿದ ನಂತರ ನಿಂಷಿಯ ಮೊಮ್ಮಗನೂ ಯೆಹೋಷಾಫಾಟನ ಮಗನೂ ಆದ ಯೇಹುವು ಎಲ್ಲಿರುತ್ತಾನೆಂದು ವಿಚಾರಿಸಿ ಅವನು ಸಿಕ್ಕಿದಾಗ ಅವನನ್ನು ಅವನ ಜೊತೆಗಾರರ ಗುಂಪಿನಿಂದ ಒಳಗಿನ ಕೋಣೆಗೆ ಕರಕೊಂಡು ಹೋಗು.
Kannada Bible (KNCL) BSI 2016
ಆ ಊರನ್ನು ಮುಟ್ಟಿದನಂತರ ನಿಂಷಿಯ ಮೊಮ್ಮಗನೂ ಯೆಹೋಷಾಫಾಟನ ಮಗನೂ ಆದ ಯೇಹುವು ಎಲ್ಲಿರುತ್ತಾನೆಂದು ವಿಚಾರಿಸು. ಅವನು ಸಿಕ್ಕಿದಾಗ ಅವನನ್ನು ಅವನ ಜೊತೆಗಾರರ ಗುಂಪಿನಿಂದ ಪ್ರತ್ಯೇಕವಾಗಿ ಕರೆದುಕೊಂಡು ಒಳಗಿನ ಕೋಣೆಗೆ ಹೋಗು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀನು ಅಲ್ಲಿಗೆ ಸೇರಿದಾಗ ನಿಂಷಿಯ ಮಗನಾಗಿರುವ ಯೆಹೋಷಾಫಾಟನ ಮಗ ಯೇಹುವನ್ನು ಅಲ್ಲಿ ಕಂಡು, ಒಳಗೆ ಪ್ರವೇಶಿಸಿ, ಅವನನ್ನು ಅವರ ಸಹೋದರರ ಮಧ್ಯದಿಂದ ಎಬ್ಬಿಸಿ, ಒಳಗಿನ ಕೋಣೆಗೆ ಕರೆದುಕೊಂಡು ಹೋಗಿ,