2 Kings 9:20 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಕಾವಲುಗಾರನು ಯೋರಾವುನಿಗೆ, “ಆ ಗುಂಪಿನ ಬಳಿಗೆ ಹೋದ ಎರಡನೆಯವನೂ ಈವರೆವಿಗೂ ಹಿಂದುರುಗಿ ಬರಲೇ ಇಲ್ಲ. ರಥವನ್ನು ಓಡಿಸುತ್ತಿರುವವನು ಹುಚ್ಚನಂತೆ ರಥವನ್ನು ಓಡಿಸುತ್ತಿರುವುದನ್ನು ನೋಡಿದರೆ ಅವನು ನಿಂಷಿಯ ಮೊಮ್ಮಗನಾದ ಯೇಹುವಿರಬೇಕು!” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕಾವಲುಗಾರನು ತಿರುಗಿ ಅರಸನಿಗೆ, “ಎರಡನೆಯವನೂ ಆ ಗುಂಪನ್ನು ತಲುಪಿದ್ದಾನೆ. ಆದರೆ ಹಿಂತಿರುಗಿ ಬರುವುದು ಕಾಣಿಸುತ್ತಿಲ್ಲ. ರಥದಲ್ಲಿ ಕುಳಿತಿರುವವನು ಕುದುರೆಗಳನ್ನು ಹುಚ್ಚು ಹಿಡಿದವನಂತೆ ಓಡಿಸುವುದನ್ನು ನೋಡಿದರೆ ಅವನು ನಿಂಷಿಯ ಮೊಮ್ಮಗನಾದ ಯೇಹುವೇ ಇರಬೇಕು” ಎಂದು ಹೇಳಿದನು.
Kannada BSI Bible 2016
ಆಗ ಕಾವಲುಗಾರನು--ಇವನೂ ಅವರ ಬಳಿಗೆ ಹೋಗಿ ತಿರಿಗಿ ಬರಲಿಲ್ಲ. ಇದಲ್ಲದೆ ಓಡಿಸುವದು ನಿಂಷಿಯ ಮಗನಾದ ಯೇಹುವು ಓಡಿಸುವ ಹಾಗಿದೆ; ಯಾಕಂದರೆ ಅವನು ಹುಚ್ಚುತನವಾಗಿ ಓಡಿಸುತ್ತಾನೆ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕಾವಲುಗಾರನು ತಿರಿಗಿ ಅರಸನಿಗೆ - ಎರಡನೆಯವನೂ ಆ ಗುಂಪನ್ನು ಮುಟ್ಟಿದನು; ಆದರೆ ಹಿಂದಿರುಗಿ ಬರುವದು ಕಾಣಿಸುವದೇ ಇಲ್ಲ. ರಥದಲ್ಲಿ ಕೂತಿರುವವನು ಕುದುರೆಗಳನ್ನು ಹುಚ್ಚು ಹಿಡಿದವನಂತೆ ಓಡಿಸುವದನ್ನು ನೋಡಿದರೆ ಅವನು ನಿಂಷಿಯ ಮೊಮ್ಮಗನಾದ ಯೇಹುವಾಗಿರಬೇಕು ಎಂದು ಹೇಳಿದನು.
Kannada Bible (KNCL) BSI 2016
ಕಾವಲುಗಾರನು ಪುನಃ ಅರಸನಿಗೆ, “ಎರಡನೆಯವನೂ ಆ ಗುಂಪನ್ನು ಮುಟ್ಟಿದನು; ಆದರೆ ಹಿಂದಿರುಗಿ ಬರುವುದು ಕಾಣಿಸುವುದೇ ಇಲ್ಲ. ರಥದಲ್ಲಿ ಕುಳಿತಿರುವವನು ಕುದುರೆಗಳನ್ನು ಹುಚ್ಚುಹಿಡಿದವನಂತೆ ಓಡಿಸುವುದನ್ನು ನೋಡಿದರೆ ಅವನು, ನಿಂಷಿಯ ಮೊಮ್ಮಗನಾದ ಯೇಹುವಾಗಿರಬೇಕು,” ಎಂದು ಹೇಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಕಾವಲುಗಾರನು, “ಇವನೂ ಅವರ ಬಳಿಗೆ ಹೋಗಿ ತಿರುಗಿ ಬರಲಿಲ್ಲ. ಇದಲ್ಲದೆ ರಥವನ್ನು ಓಡಿಸುವುದು ನಿಂಷಿಯ ಮಗನಾದ ಯೇಹುವು ಓಡಿಸುವ ಹಾಗಿದೆ, ಏಕೆಂದರೆ ಅವನು ಹುಚ್ಚನಂತೆ ಓಡಿಸುತ್ತಿದ್ದಾನೆ,” ಎಂದನು.