2 Kings 9:21 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೋರಾವುನು, “ನನ್ನ ರಥವನ್ನು ಸಿದ್ಧಗೊಳಿಸು!” ಎಂದು ಹೇಳಿದನು. ಯೋರಾವುನ ಸೇವಕನು ರಥವನ್ನು ಸಿದ್ಧಗೊಳಿಸಿದನು. ಇಸ್ರೇಲಿನ ರಾಜನಾದ ಯೋರಾವುನು ಮತ್ತು ಯೆಹೂದದ ರಾಜನಾದ ಅಹಜ್ಯನು ಯೇಹುವನ್ನು ಭೇಟಿಮಾಡಲು ತಮ್ಮ ರಥಗಳಲ್ಲಿ ಹೋದರು. ಅವರು ಇಜ್ರೇಲಿನವನಾದ ನಾಬೋತನ ಹೊಲದಲ್ಲಿ ಯೇಹುವನ್ನು ಸಂಧಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೋರಾಮನು ರಥವನ್ನು ಸಿದ್ಧಮಾಡಬೇಕೆಂದು ತನ್ನ ಸೇವಕರಿಗೆ ಆಜ್ಞಾಪಿಸಿದನು. ಅವರು ಸಿದ್ಧಮಾಡಿದರು. ಆಗ ಇಸ್ರಾಯೇಲರ ಅರಸನಾದ ಯೋರಾಮನು ಯೆಹೂದ್ಯರ ಅರಸನಾದ ಅಹಜ್ಯನೂ ತಮ್ಮ ತಮ್ಮ ರಥಗಳಲ್ಲಿ ಕುಳಿತುಕೊಂಡು ಯೇಹುವನ್ನು ಎದುರುಗೊಳ್ಳುವುಕ್ಕಾಗಿ ಹೊರಟು ಇಜ್ರೇಲಿನವನಾದ ನಾಬೋತನ ಹೊಲದಲ್ಲಿ ಅವನನ್ನು ಸಂಧಿಸಿದರು.
Kannada BSI Bible 2016
ಯೋರಾಮನು ರಥಹೂಡಬೇಕೆಂದು ಹೇಳಿದನು. ಅವನ ರಥವು ಸಿದ್ಧವಾಯಿತು. ಆಗ ಇಸ್ರಾಯೇಲಿನ ಅರಸನಾದ ಯೋರಾಮನೂ ಯೆಹೂ ದದ ಅರಸನಾದ ಅಹಜ್ಯನೂ ಹೊರಟು ಅವನವನು ತನ್ನ ತನ್ನ ರಥದಲ್ಲಿ ಏರಿ ಯೇಹುವಿಗೆ ಎದುರಾಗಿ ಹೊರಟು ಇಜ್ರೇಲ್ಯನಾದ ನಾಬೋತನ ಹೊಲದಲ್ಲಿ ಅವನನ್ನು ಸಂಧಿಸಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೋರಾಮನು ರಥಹೂಡಬೇಕೆಂದು ತನ್ನ ಸೇವಕರಿಗೆ ಆಜ್ಞಾಪಿಸಿದನು. ಅವರು ಹೂಡಿದರು. ಆಗ ಇಸ್ರಾಯೇಲ್ಯರ ಅರಸನಾದ ಇವನೂ ಯೆಹೂದ್ಯರ ಅರಸನಾದ ಅಹಜ್ಯನೂ ತಮ್ಮತಮ್ಮ ರಥಗಳಲ್ಲಿ ಕೂತುಕೊಂಡು ಯೇಹುವನ್ನು ಎದುರುಗೊಳ್ಳುವದಕ್ಕಾಗಿ ಹೊರಟು ಇಜ್ರೇಲಿನವನಾದ ನಾಬೋತನ ಹೊಲದಲ್ಲಿ ಅವನನ್ನು ಸಂಧಿಸಿದರು.
Kannada Bible (KNCL) BSI 2016
ಯೋರಾಮನು ರಥಹೂಡಬೇಕೆಂದು ತನ್ನ ಸೇವಕರಿಗೆ ಆಜ್ಞಾಪಿಸಿದನು. ಅವರು ಹೂಡಿದರು. ಆಗ ಇಸ್ರಯೇಲರ ಅರಸನಾದ ಇವನೂ ಯೆಹೂದ್ಯರ ಅರಸನಾದ ಅಹಜ್ಯನೂ ತಮ್ಮ ತಮ್ಮ ರಥಗಳಲ್ಲಿ ಕುಳಿತುಕೊಂಡು, ಯೇಹುವನ್ನು ಎದುರುಗೊಳ್ಳುವುದಕ್ಕಾಗಿ ಹೊರಟು, ಜೆಸ್ರೀಲಿನವನಾದ ನಾಬೋತನ ಹೊಲದಲ್ಲಿ ಅವನನ್ನು ಸಂಧಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೋರಾಮನು, “ನನ್ನ ರಥವನ್ನು ಸಿದ್ಧಮಾಡು,” ಎಂದನು. ಅವನ ರಥವು ಸಿದ್ಧವಾಯಿತು. ಆಗ ಇಸ್ರಾಯೇಲಿನ ಅರಸನಾದ ಯೋರಾಮನೂ, ಯೆಹೂದದ ಅರಸನಾದ ಅಹಜ್ಯನೂ ಹೊರಟು, ಅವರವರು ತಮ್ಮ ತಮ್ಮ ರಥದಲ್ಲಿ ಏರಿ ಯೇಹುವಿಗೆ ಎದುರಾಗಿ ಹೊರಟು, ಇಜ್ರೆಯೇಲಿನವನಾದ ನಾಬೋತನಿಗೆ ಸಂಬಂಧಿಸಿದ ಸ್ಥಳದಲ್ಲಿ ಅವನನ್ನು ಸಂಧಿಸಿದರು.