2 Kings 9:26 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋವನು, ‘ನೀನು ನಿನ್ನೆ ನಾಬೋತನ ಮತ್ತು ಅವನ ಮಕ್ಕಳ ರಕ್ತವನ್ನು ಯಾವ ಹೊಲದಲ್ಲಿ ಸುರಿಸಿದೆಯೋ ಅದೇ ಹೊಲದಲ್ಲಿ ನಿನಗೆ ಮುಯ್ಯಿ ತೀರಿಸುವೆನು’ ಎಂದು ಪ್ರವಾದಿಯಿಂದ ಹೇಳಿಸಿದ್ದು ನಿನಗೆ ನೆನಪಿರುವುದಲ್ಲವೇ? ಯೆಹೋವನ ಮಾತು ನೆರವೇರುವಂತೆ ಯೋರಾವುನ ದೇಹವನ್ನು ತೆಗೆದು ಅದೇ ಹೊಲದಲ್ಲಿ ಎಸೆದುಬಿಡು!” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನು ಅಹಾಬನಿಗೆ, ‘ನನ್ನ ಮಾತನ್ನು ಕೇಳು, ನೀನು ನಿನ್ನೆ ಸುರಿಸಿದ ನಾಬೋತನ ಮತ್ತು ಅವನ ಮಕ್ಕಳ ರಕ್ತವನ್ನು ನಿಶ್ಚಯವಾಗಿ ನೋಡಿದ್ದೇನೆ. ನೀನು ಅವರ ರಕ್ತವನ್ನು ಸುರಿಸಿದ ಹೊಲದಲ್ಲೇ ನಿನಗೆ ಮುಯ್ಯಿತೀರಿಸುವೆನು’ ಎಂದು ಪ್ರವಾದಿಯಿಂದ ಹೇಳಿಸಿದ್ದು ನಿನಗೆ ನೆನಪಿರುತ್ತದಲ್ಲಾ, ಯೆಹೋವನ ಆ ಮಾತು ನೆರವೇರುವಂತೆ ಇವನ ಶವವನ್ನು ಆ ಹೊಲದಲ್ಲಿ ಬಿಸಾಡು” ಎಂದು ಹೇಳಿದನು.
Kannada BSI Bible 2016
ನಾನೂ ನೀನೂ ಅವನ ತಂದೆಯಾದ ಅಹಾಬನ ಹಿಂದೆ ಕುದುರೆ ಏರಿಕೊಂಡು ಹೋಗುತ್ತಿರುವಾಗ ಕರ್ತನು ಈ ಭಾರವನ್ನು ಅವನ ಮೇಲೆ ಹೊರಿಸಿದನೆಂದು ಜ್ಞಾಪಕಮಾಡಿಕೋ. ಏನಂದರೆ--ನಾಬೋತನ ರಕ್ತವನ್ನೂ ಅವನ ಕುಮಾರರ ರಕ್ತವನ್ನೂ ನಿನ್ನೆ ನಾನು ನಿಶ್ಚಯವಾಗಿ ನೋಡಿದೆನಲ್ಲಾ ಎಂದು ಕರ್ತನು ಹೇಳುತ್ತಾನೆ. ಇದಲ್ಲದೆ--ಇದೇ ಹೊಲದಲ್ಲಿ ನಿನಗೆ ಮುಯ್ಯಿಗೆ ಮುಯ್ಯಿ ಕೊಡುವೆ ನೆಂದು ಕರ್ತನು ಹೇಳುತ್ತಾನೆ. ಆದದರಿಂದ ಕರ್ತನ ವಾಕ್ಯದ ಪ್ರಕಾರ ಅವನನ್ನು ಎತ್ತಿಕೊಂಡು ಆ ಹೊಲ ದಲ್ಲಿ ಹಾಕಿಬಿಡು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನನ್ನ ಮಾತನ್ನು ಕೇಳು, ನೀನು ನಿನ್ನೆ ಸುರಿಸಿದ ನಾಬೋತನ ಮತ್ತು ಅವನ ಮಕ್ಕಳ ರಕ್ತವನ್ನು ನಿಶ್ಚಯವಾಗಿ ನೋಡಿದ್ದೇನೆ. ನೀನು ಅವರ ರಕ್ತವನ್ನು ಸುರಿಸಿದ ಹೊಲದಲ್ಲೇ ನಿನಗೆ ಮುಯ್ಯಿತೀರಿಸುವೆನು ಎಂದು ಪ್ರವಾದಿಯಿಂದ ಹೇಳಿಸಿದ್ದು ನಿನಗೆ ನೆನಪಿರುತ್ತದಲ್ಲಾ; ಯೆಹೋವನ ಆ ಮಾತು ನೆರವೇರುವಂತೆ ಇವನ ಶವವನ್ನು ಆ ಹೊಲದಲ್ಲಿ ಹಾಕಿಬಿಡು ಎಂದು ಹೇಳಿದನು.
Kannada Bible (KNCL) BSI 2016
ಅಹಾಬನಿಗೆ ಸರ್ವೇಶ್ವರ, ‘ನನ್ನ ಮಾತನ್ನು ಕೇಳು, ನೀನು ನಿನ್ನೆ ಸುರಿಸಿದ ನಾಬೋತನ ಮತ್ತು ಅವನ ಮಕ್ಕಳ ರಕ್ತವನ್ನು ನಿಶ್ಚಯವಾಗಿ ನೋಡಿದ್ದೇನೆ. ನೀನು ಅವರ ರಕ್ತವನ್ನು ಸುರಿಸಿದ ಹೊಲದಲ್ಲೇ ನಿನಗೆ ಮುಯ್ಯಿತೀರಿಸುವೆನು,’ ಎಂದು ಪ್ರವಾದಿಯಿಂದ ಹೇಳಿಸಿದ್ದು ನಿನಗೆ ನೆನಪಿರುತ್ತದಲ್ಲವೆ?’ ಎಂದಿದ್ದರು. ಸರ್ವೇಶ್ವರನ ಆ ನುಡಿ ನೆರವೇರುವಂತೆ ಇವನ ಶವವನ್ನು ಆ ಹೊಲದಲ್ಲೇ ಹಾಕಿಬಿಡು,” ಎಂದು ಹೇಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾಬೋತನ ರಕ್ತವನ್ನೂ, ಅವನ ಪುತ್ರರ ರಕ್ತವನ್ನೂ ನಿನ್ನೆ ನಾನು ನಿಶ್ಚಯವಾಗಿ ನೋಡಿದೆನಲ್ಲಾ, ಎಂದು ಯೆಹೋವ ದೇವರು ಹೇಳುತ್ತಾರೆ. ಇದಲ್ಲದೆ ಇದೇ ಹೊಲದಲ್ಲಿ ನಿನಗೆ ಮುಯ್ಯಿಗೆ ಮುಯ್ಯಿ ಕೊಡುವೆನೆಂದು ಯೆಹೋವ ದೇವರು ಹೇಳುತ್ತಾರೆ. ಆದ್ದರಿಂದ ಯೆಹೋವ ದೇವರ ವಾಕ್ಯದ ಪ್ರಕಾರ ಎತ್ತಿಕೊಂಡು ಆ ಹೊಲದಲ್ಲಿ ಅವನನ್ನು ಹಾಕಿಬಿಡು,” ಎಂದನು.