2 Kings 9:8 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅಹಾಬನ ಕುಟುಂಬವೆಲ್ಲ ಸಾಯುತ್ತದೆ. ಅಹಾಬನ ಕುಟುಂಬದಲ್ಲಿ ಒಬ್ಬ ಗಂಡಸಾದರೂ ಜೀವಿಸಿರಲು ನಾನು ಬಿಡುವುದಿಲ್ಲ. ಆ ಗಂಡಸು ಇಸ್ರೇಲಿನಲ್ಲಿ ಸ್ವತಂತ್ರವಾಗಿರಲಿ ಇಲ್ಲವೆ ಗುಲಾಮನಾಗಿರಲಿ ಅದು ನನಗೆ ಮುಖ್ಯವಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಹಾಬನ ಕುಟುಂಬದವರೆಲ್ಲಾ ನಿರ್ನಾಮವಾಗಬೇಕು. ಅವನ ಸಂತಾನದ ಗಂಡಸರಲ್ಲಿ ಸ್ವತಂತ್ರರಾಗಲಿ, ಗುಲಾಮನಾಗಲಿ ಎಲ್ಲರನ್ನೂ ಇಸ್ರಾಯೇಲರೊಳಗಿಂದ ತೆಗೆದುಹಾಕುವೆನು.
Kannada BSI Bible 2016
ಅಹಾಬನ ಮನೆಯೆಲ್ಲಾ ನಾಶವಾಗಿ ಹೋಗುವದು. ಅಹಾಬನ ಸಂತಾನದ ಗಂಡಸರನ್ನೂ ಇಸ್ರಾಯೇಲಿ ನಲ್ಲಿ ಉಳಿದು ಬಚ್ಚಿಡಲ್ಪಟ್ಟವನನ್ನೂ ನಾನು ಕಡಿದು ಬಿಡುವೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಹಾಬನ ಕುಟುಂಬದವರೆಲ್ಲಾ ನಿರ್ನಾಮವಾಗಬೇಕು. ಅವನ ಸಂತಾನದ ಗಂಡಸರಲ್ಲಿ ಸ್ವತಂತ್ರರಾಗಿರಲಿ ಪರತಂತ್ರರಾಗಿರಲಿ ಎಲ್ಲರನ್ನೂ ಇಸ್ರಾಯೇಲ್ಯರೊಳಗಿಂದ ತೆಗೆದುಹಾಕುವೆನು.
Kannada Bible (KNCL) BSI 2016
ಅಹಾಬನ ಕುಟುಂಬದವರೆಲ್ಲಾ ನಿರ್ನಾಮವಾಗಬೇಕು. ಅವನ ಸಂತಾನದ ಗಂಡಸರಲ್ಲಿ ಸ್ವತಂತ್ರರಾಗಿರಲಿ, ಪರತಂತ್ರರಾಗಿರಲಿ ಎಲ್ಲರನ್ನೂ ಇಸ್ರಯೇಲರ ಮಧ್ಯೆಯಿಂದ ತೆಗೆದುಹಾಕುವೆನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅಹಾಬನ ಮನೆಯೆಲ್ಲಾ ನಾಶವಾಗುವುದು. ಇಸ್ರಾಯೇಲಿನಲ್ಲಿ ಉಳಿದಿರುವ ಅಹಾಬನ ಗಂಡಸರಲ್ಲಿ ಸ್ವತಂತ್ರರಾಗಲಿ, ಗುಲಾಮರಾಗಲಿ ಎಲ್ಲರನ್ನೂ ತೆಗೆದುಹಾಕುವೆನು.