2 Samuel 1:13 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸೌಲನ ಮರಣದ ಬಗ್ಗೆ ತಿಳಿಸಿದ ಯುವಕನಿಗೆ ದಾವೀದನು, “ನೀನು ಎಲ್ಲಿಂದ ಬಂದಿರುವೆ?” ಎಂದು ಕೇಳಿದನು. ಆ ಯುವಕನು, “ನಾನು ಇಸ್ರೇಲ್ ಜನರಲ್ಲಿ ವಾಸಿಸುತ್ತಿರುವ ವಿದೇಶೀಯನ ಮಗ. ನಾನೊಬ್ಬ ಅಮಾಲೇಕ್ಯನು” ಎಂದು ಉತ್ತರಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದಾವೀದನು ವರ್ತಮಾನ ತಂದ ಯುವಕನನ್ನು, “ನೀನು ಎಲ್ಲಿಯವನು?” ಎಂದು ಕೇಳಿದನು. ಅವನು, “ನಾನು ಇಸ್ರಾಯೇಲರಲ್ಲಿ ಪ್ರವಾಸಿಯಾಗಿರುವ ಅಮಾಲೇಕ್ಯನು” ಎಂದು ಉತ್ತರಕೊಟ್ಟನು.
Kannada BSI Bible 2016
ಆದರೆ ದಾವೀದನು ಅದನ್ನು ತನಗೆ ತಿಳಿಸಿದ ಯೌವನಸ್ಥನನ್ನು--ನೀನು ಎಲ್ಲಿಯ ವನು ಎಂದು ಕೇಳಿದಾಗ ಅವನು--ನಾನು ಅನ್ಯನ ಮಗನಾದ ಅಮಾಲೇಕ್ಯನು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ದಾವೀದನು ವರ್ತಮಾನ ತಂದ ಪ್ರಾಯಸ್ಥನನ್ನು - ನೀನೆಲ್ಲಿಯವನು ಎಂದು ಕೇಳಿದ್ದಕ್ಕೆ ಅವನು - ನಾನು ಇಸ್ರಾಯೇಲ್ಯರಲ್ಲಿ ಪ್ರವಾಸಿಯಾಗಿರುವ ಅಮಾಲೇಕ್ಯನ ಮಗನು ಎಂದು ಉತ್ತರಕೊಟ್ಟನು.
Kannada Bible (KNCL) BSI 2016
ದಾವೀದನು ವರ್ತಮಾನ ತಂದ ಆ ಯುವಕನನ್ನು, “ನೀನೆಲ್ಲಿಯವನು?” ಎಂದು ಕೇಳಿದ್ದಕ್ಕೆ ಅವನು, “ನಾನು ಇಸ್ರಯೇಲರಲ್ಲಿ ಪ್ರವಾಸಿಯಾಗಿರುವ ಒಬ್ಬ ಅಮಾಲೇಕ್ಯನು,” ಎಂದು ಉತ್ತರಕೊಟ್ಟನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದಾವೀದನು ತನಗೆ ವರ್ತಮಾನ ತಿಳಿಸಿದ ಯುವಕನನ್ನು, “ನೀನು ಎಲ್ಲಿಯವನು?” ಎಂದು ಕೇಳಿದನು. ಅವನು, “ನಾನು ವಿದೇಶಿಯ ಮಗನಾದ ಅಮಾಲೇಕ್ಯನು,” ಎಂದನು.