2 Samuel 10:3 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದರೆ ಅಮ್ಮೋನಿಯರ ನಾಯಕರು ತಮ್ಮ ಪ್ರಭುವಾದ ಹಾನೂನನಿಗೆ, “ನಿನ್ನನ್ನು ಸಂತೈಸಲು ಕೆಲವು ಜನರನ್ನು ಕಳುಹಿಸುವುದರ ಮೂಲಕ ದಾವೀದನು ನಿನ್ನ ತಂದೆಯನ್ನು ಗೌರವಿಸಲು ಪ್ರಯತ್ನಿಸುತ್ತಿರುವನೆಂದು ನೀನು ಭಾವಿಸಿರುತ್ತಿಯಲ್ಲವೇ? ಇಲ್ಲ! ನಿನ್ನ ನಗರದ ಸಂಗತಿಗಳನ್ನು ರಹಸ್ಯವಾಗಿ ಕಂಡುಕೊಳ್ಳಲು ಮತ್ತು ತಿಳಿದುಕೊಳ್ಳಲು ದಾವೀದನು ಈ ಜನರನ್ನು ಕಳುಹಿಸಿದ್ದಾನೆ. ಅವರು ನಿನ್ನ ವಿರುದ್ಧವಾಗಿ ಯುದ್ಧಮಾಡಲು ಯೋಜನೆ ಮಾಡುತ್ತಿದ್ದಾರೆ” ಎಂದು ಹೇಳಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಮ್ಮೋನಿಯರ ರಾಜ ಪ್ರತಿನಿಧಿಗಳು ತಮ್ಮ ಒಡೆಯನಾದ ಹಾನೂನನಿಗೆ, “ದಾವೀದನು ನಿನ್ನ ಬಳಿಗೆ ಸಂತೈಸುವವರನ್ನು ಕಳುಹಿಸಿದ್ದರಿಂದ ಅವನು ನಿನ್ನ ತಂದೆಯನ್ನು ಸನ್ಮಾನಿಸುವವನು ಎಂದು ನೀನು ತಿಳಿದುಕೊಂಡಿರಬಹುದೋ? ಅವರು ಪಟ್ಟಣವನ್ನು ಸಂಚರಿಸಿ ನೋಡಿ, ಸ್ವಾಧಿನಮಾಡಿಕೊಳ್ಳಬೇಕೆಂದು ತನ್ನ ಪ್ರತಿನಿಧಿಗಳನ್ನು ಕಳುಹಿಸಿದ್ದಾನೆ” ಎಂದು ಹೇಳಿದರು.
Kannada BSI Bible 2016
ದಾವೀದನ ಸೇವಕರು ಅಮ್ಮೋನನ ಮಕ್ಕಳ ದೇಶಕ್ಕೆ ಬಂದಾಗ ಅಮ್ಮೋನನ ಮಕ್ಕಳ ಪ್ರಧಾನರು ತಮ್ಮ ಯಜಮಾನನಾದ ಹಾನೂನ ನಿಗೆ--ದಾವೀದನು ಆದರಣೆ ಹೇಳುವವರನ್ನು ನಿನ್ನ ಬಳಿಗೆ ಕಳುಹಿಸಿದ್ದರಿಂದ ನಿನ್ನ ತಂದೆಯನ್ನು ಘನ ಪಡಿಸುತ್ತಾನೆಂದು ಯೋಚಿಸುತ್ತೀಯೋ? ಈ ಪಟ್ಟಣ ವನ್ನು ಶೋಧಿಸುವದಕ್ಕೂ ಪಾಳತಿನೋಡುವದಕ್ಕೂ ಅದನ್ನು ಕೆಡವಿಹಾಕುವದಕ್ಕೂ ದಾವೀದನು ತನ್ನ ಸೇವಕರನ್ನು ನಿನ್ನ ಬಳಿಗೆ ಕಳುಹಿಸಿದ್ದಲ್ಲವೋ ಅಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಲ್ಲಿನ ಪ್ರಭುಗಳು ತಮ್ಮ ಒಡೆಯನಾದ ಹಾನೂನನಿಗೆ - ದಾವೀದನು ನಿನ್ನ ಬಳಿಗೆ ಸಂತೈಸುವವರನ್ನು ಕಳುಹಿಸಿದ್ದರಿಂದ ಅವನು ನಿನ್ನ ತಂದೆಯನ್ನು ಸನ್ಮಾನಿಸುವವನಾಗಿದ್ದಾನೆಂದು ತಿಳಿಯುತ್ತೀಯೋ? ಪಟ್ಟಣವನ್ನು ಸಂಚರಿಸಿ ನೋಡಿ ಅದನ್ನು ಸ್ವಾಧೀನ ಮಾಡಿಕೊಳ್ಳಬೇಕೆಂದು ತನ್ನ ಆಳುಗಳನ್ನು ಕಳುಹಿಸಿದ್ದಾನೆ ಎಂದು ಹೇಳಿದರು.
Kannada Bible (KNCL) BSI 2016
ಅಲ್ಲಿನ ನಾಯಕರು ತಮ್ಮ ಒಡೆಯ ಹಾನೂನನಿಗೆ, “ದಾವೀದನು ನಿಮ್ಮ ಬಳಿಗೆ ಸಂತೈಸುವವರನ್ನು ಕಳುಹಿಸಿದ್ದಾನೆ. ಇದರಿಂದ ಅವನು ನಿಮ್ಮ ತಂದೆಯನ್ನು ಸನ್ಮಾನಿಸುತ್ತಾನೆಂದು ತಿಳಿಯುತ್ತೀರೋ? ಇಲ್ಲವೇ ಇಲ್ಲ. ಪಟ್ಟಣವನ್ನು ಸಂಚರಿಸಿ ನೋಡಿ ಅದನ್ನು ಸ್ವಾಧೀನಮಾಡಿಕೊಳ್ಳಬೇಕೆಂದು ತನ್ನ ಆಳುಗಳನ್ನು ಕಳುಹಿಸಿದ್ದಾನೆ,” ಎಂದು ಹೇಳಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅಮ್ಮೋನಿಯರ ಪ್ರಧಾನರು ತಮ್ಮ ಯಜಮಾನನಾದ ಹಾನೂನನಿಗೆ, “ದಾವೀದನು ನಿನ್ನ ಬಳಿಗೆ ಸಂತಾಪ ಸೂಚಿಸುವವರನ್ನು ಕಳುಹಿಸಿದ್ದರಿಂದ, ನಿನ್ನ ತಂದೆಯನ್ನು ಘನಪಡಿಸುತ್ತಾನೆಂದು ಯೋಚಿಸುತ್ತೀಯೋ? ದಾವೀದನು ತನ್ನ ಸೇವಕರನ್ನು ಈ ಪಟ್ಟಣವನ್ನು ಸಂಚರಿಸಿ ನೋಡುವುದಕ್ಕೂ ಶೋಧಿಸುವುದಕ್ಕೂ ಅದನ್ನು ಕೆಡವಿ ಹಾಕುವುದಕ್ಕೂ ನಿನ್ನ ಬಳಿಗೆ ಕಳುಹಿಸಿದ್ದಾನಲ್ಲವೇ,” ಎಂದರು.