2 Samuel 11:10 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸೇವಕರು ದಾವೀದನಿಗೆ, “ಊರಿಯನು ಮನೆಗೆ ಹೋಗಲೇ ಇಲ್ಲ” ಎಂದು ಹೇಳಿದರು. ಆಗ ದಾವೀದನು, “ನೀನು ದೀರ್ಘ ಪ್ರಯಾಣದಿಂದ ಬಂದಿರುವೆ. ನೀನು ಏಕೆ ಮನೆಗೆ ಹೋಗಲಿಲ್ಲ?” ಎಂದು ಊರೀಯನನ್ನು ಕೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಊರೀಯನು ತನ್ನ ಮನೆಗೆ ಹೋಗಲಿಲ್ಲ ಎಂಬ ವರ್ತಮಾನವು ದಾವೀದನಿಗೆ ತಿಳಿದಾಗ ಅವನು ಊರೀಯನಿಗೆ, “ನೀನು ಪ್ರಯಾಣಮಾಡಿಕೊಂಡು ಬಂದಿಯಲ್ಲಾ, ಯಾಕೆ ಮನೆಗೆ ಹೋಗಲಿಲ್ಲ?” ಅಂದನು.
Kannada BSI Bible 2016
ಊರೀಯನು ತನ್ನ ಮನೆಗೆ ಹೋಗಲಿಲ್ಲವೆಂದು ದಾವೀದನಿಗೆ ತಿಳಿಸ ಲ್ಪಟ್ಟಾಗ ದಾವೀದನು ಊರೀಯನಿಗೆ -- ನೀನು ಪ್ರಯಾಣದಿಂದ ಬರಲಿಲ್ಲವೋ? ಯಾಕೆ ನಿನ್ನ ಮನೆಗೆ ಹೋಗಲಿಲ್ಲ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಊರೀಯನು ತನ್ನ ಮನೆಗೆ ಹೋಗಲಿಲ್ಲ ಎಂಬ ವರ್ತಮಾನವು ದಾವೀದನಿಗೆ ಮುಟ್ಟಿದಾಗ ಇವನು ಅವನಿಗೆ - ನೀನು ಪ್ರಯಾಣಮಾಡಿಕೊಂಡು ಬಂದಿಯಲ್ಲಾ; ಯಾಕೆ ಮನೆಗೆ ಹೋಗಲಿಲ್ಲ ಅಂದನು.
Kannada Bible (KNCL) BSI 2016
ಊರೀಯನು ತನ್ನ ಮನೆಗೆ ಹೋಗಲಿಲ್ಲ ಎಂಬ ವರ್ತಮಾನ ದಾವೀದನಿಗೆ ಮುಟ್ಟಿತು. ಆಗ ದಾವೀದನು ಊರೀಯನಿಗೆ, “ನೀನು ದೀರ್ಘಪ್ರಯಾಣಮಾಡಿ ಬಂದಿರುವೆಯಲ್ಲವೆ? ಏಕೆ ಮನೆಗೆ ಹೋಗಲಿಲ್ಲ?” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಊರೀಯನು ತನ್ನ ಮನೆಗೆ ಹೋಗಲಿಲ್ಲವೆಂಬ ವರ್ತಮಾನವು ದಾವೀದನಿಗೆ ಮುಟ್ಟಿದಾಗ ದಾವೀದನು ಊರೀಯನಿಗೆ, “ನೀನು ಪ್ರಯಾಣದಿಂದ ಬರಲಿಲ್ಲವೋ? ಏಕೆ ನಿನ್ನ ಮನೆಗೆ ಹೋಗಲಿಲ್ಲ?” ಎಂದನು.