2 Samuel 11:16 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅಮ್ಮೋನಿಯರಲ್ಲಿ ಅತ್ಯಂತ ಧೈರ್ಯಶಾಲಿಗಳು ಆ ನಗರದಲ್ಲಿ ಎಲ್ಲಿರುವರೆಂಬುದನ್ನು ಯೋವಾಬನು ಗುರುತಿಸಿದನು. ಆ ಸ್ಥಳಕ್ಕೆ ಕಳುಹಿಸಲು ಊರೀಯನನ್ನು ಆರಿಸಿಕೊಂಡನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೋವಾಬನು ಪಟ್ಟಣಕ್ಕೆ ಮುತ್ತಿಗೆ ಹಾಕುವಾಗ ಶೂರರಾದ ಶತ್ರುಸೈನಿಕರು ಎಲ್ಲಿರುತ್ತಾರೆಂದು ಗೊತ್ತುಮಾಡಿಕೊಂಡು ಊರೀಯನನ್ನು ಅಲ್ಲಿ ನಿಲ್ಲಿಸಿದನು.
Kannada BSI Bible 2016
ಹಾಗೆಯೇ ಯೋವಾಬನು ಆ ಪಟ್ಟಣವನ್ನು ನೋಡಿಕೊಂಡಾಗ ಯಾವ ಸ್ಥಳದಲ್ಲಿ ಪರಾಕ್ರಮಶಾಲಿಗಳು ಇರುವರೆಂದು ತಿಳುಕೊಂಡನೋ ಅಲ್ಲಿ ಊರೀಯನನ್ನು ನಿಲ್ಲಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೋವಾಬನು ಪಟ್ಟಣಕ್ಕೆ ಮುತ್ತಿಗೆಹಾಕುವಾಗ ಶೂರರಾದ ಶತ್ರುಸೈನಿಕರೆಲ್ಲಿರುತ್ತಾರೆಂದು ಗೊತ್ತುಮಾಡಿಕೊಂಡು ಊರೀಯನನ್ನು ಅಲ್ಲಿ ನಿಲ್ಲಿಸಿದನು.
Kannada Bible (KNCL) BSI 2016
ಯೋವಾಬನು ಪಟ್ಟಣಕ್ಕೆ ಮುತ್ತಿಗೆ ಹಾಕುವಾಗ ಶತ್ರುಸೈನಿಕರು ಎಲ್ಲಿ ಪ್ರಬಲರಾಗಿರುತ್ತಾರೆಂದು ಗೊತ್ತುಮಾಡಿಕೊಂಡು ಊರೀಯನನ್ನು ಅಲ್ಲಿಗೆ ಕಳುಹಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹಾಗೆಯೇ ಯೋವಾಬನು ಆ ಪಟ್ಟಣವನ್ನು ಮುತ್ತಿಗೆ ಹಾಕುವಾಗ, ಯಾವ ಸ್ಥಳದಲ್ಲಿ ಪರಾಕ್ರಮಶಾಲಿಗಳು ಇರುವರೆಂದು ತಿಳಿದುಕೊಂಡು, ಅಲ್ಲಿ ಊರೀಯನನ್ನು ನಿಲ್ಲಿಸಿದನು.