2 Samuel 12:17 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ದಾವೀದನ ಕುಟುಂಬದ ನಾಯಕರು ಬಂದು ಅವನನ್ನು ನೆಲದಿಂದ ಮೇಲಕ್ಕೆತ್ತಲು ಪ್ರಯತ್ನಿಸಿದರು. ಆದರೆ ದಾವೀದನು ಮೇಲೇಳಲಿಲ್ಲ. ಅವನು ಈ ನಾಯಕರೊಂದಿಗೆ ಊಟ ಮಾಡಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನ ಮನೆಯ ಹಿರಿಯ ಸೇವಕರು ಅವನನ್ನು ಎಬ್ಬಿಸುವುದಕ್ಕೆ ಹೋದರು. ಆದರೆ ಅವನು ಏಳಲೇ ಇಲ್ಲ. ಅವರೊಡನೆ ಆಹಾರ ತೆಗೆದುಕೊಳ್ಳಲೂ ಇಲ್ಲ.
Kannada BSI Bible 2016
ಅವನನ್ನು ಎಬ್ಬಿಸುವದಕ್ಕೆ ಅವನ ಮನೆಯ ಹಿರಿಯರು ಅವನ ಬಳಿಗೆ ಬಂದರು; ಆದರೆ ಅವನಿಗೆ ಮನಸ್ಸಿಲ್ಲದೆ ಇತ್ತು. ಅವರ ಸಂಗಡ ಭೋಜನ ಮಾಡದೆ ಹೋದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನ ಮನೆಯ ಹಿರೀಸೇವಕರು ಅವನನ್ನು ಎಬ್ಬಿಸುವದಕ್ಕೆ ಹೋದರು. ಆದರೆ ಅವನು ಏಳಲೂ ಇಲ್ಲ. ಅವರೊಡನೆ ಆಹಾರ ತೆಗೆದುಕೊಳ್ಳಲೂ ಇಲ್ಲ.
Kannada Bible (KNCL) BSI 2016
ಆಸ್ಥಾನದ ಅಧಿಕಾರಿಗಳು ಅವನನ್ನು ಎಬ್ಬಿಸುವುದಕ್ಕೆ ಹೋದರು. ಆದರೆ ಅವನು ಏಳಲೂ ಇಲ್ಲ, ಅವರೊಡನೆ ಆಹಾರ ತೆಗೆದುಕೊಳ್ಳಲೂ ಇಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನನ್ನು ಎಬ್ಬಿಸುವುದಕ್ಕೆ ಅವನ ಮನೆಯ ಹಿರಿಯರು ಅವನ ಬಳಿಗೆ ಬಂದರು. ಆದರೆ ಅವನಿಗೆ ಮನಸ್ಸಿಲ್ಲದೆ ಇತ್ತು. ಅವರ ಸಂಗಡ ಭೋಜನ ಮಾಡದೆ ಇದ್ದನು.