2 Samuel 12:18 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಏಳನೆಯ ದಿನ ಆ ಮಗು ಸತ್ತಿತು. ಮಗು ಸತ್ತದ್ದನ್ನು ದಾವೀದನಿಗೆ ತಿಳಿಸಲು ಅವನ ಸೇವಕರು ಅಂಜಿದರು. ಅವರು, “ನೋಡಿ, ಮಗು ಜೀವಂತವಾಗಿರುವಾಗ ನಾವು ದಾವೀದನೊಂದಿಗೆ ಮಾತನಾಡಲು ಪ್ರಯತ್ನಿಸಿದೆವು. ಆದರೆ ಅವನು ನಮ್ಮ ಮಾತನ್ನು ಕೇಳಲಿಲ್ಲ. ಮಗುವು ಸತ್ತಿತೆಂದು ನಾವು ದಾವೀದನಿಗೆ ತಿಳಿಸಿದರೆ, ಬಹುಶಃ ಅವನು ತನಗೆ ಏನಾದರೂ ಕೇಡುಮಾಡಿಕೊಳ್ಳುತ್ತಾನೆ” ಎಂಬುದಾಗಿ ಮಾತಾಡಿಕೊಂಡರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಏಳನೆಯ ದಿನ ಮಗು ಸತ್ತುಹೋಯಿತು. ಅವನ ಸೇವಕರು ಭಯಪಟ್ಟು ಈ ವರ್ತಮಾನವನ್ನು ದಾವೀದನಿಗೆ ತಿಳಿಸಲಿಲ್ಲ. ಅವರು, “ಹುಡುಗನು ಜೀವದಿಂದಿದ್ದಾಗಲೇ ಅವನು ನಮ್ಮ ಸಂತೈಸುವಿಕೆಯನ್ನು ಲಕ್ಷಿಸಲಿಲ್ಲ. ಹೀಗಿರುವಲ್ಲಿ ಮಗುವಿನ ಮರಣದ ವಾರ್ತೆಯನ್ನು ಅವನಿಗೆ ತಿಳಿಸಿದರೆ ಅವನು ತನಗೆ ಏನಾದರೂ ಕೇಡುಮಾಡಿಕೊಂಡಾನಲ್ಲವೇ” ಎಂದು ಮಾತನಾಡಿಕೊಳ್ಳುತ್ತಿದ್ದರು.
Kannada BSI Bible 2016
ಮಗುವು ಏಳನೇ ದಿವಸ ಸತ್ತುಹೋಯಿತು. ಆಗ ಮಗುವು ಸತ್ತು ಹೋಯಿತೆಂದು ದಾವೀದನ ಸೇವಕರು ಅವನಿಗೆ ತಿಳಿ ಸುವದಕ್ಕೆ ಭಯಪಟ್ಟರು. ಯಾಕಂದರೆ ಇಗೋ, ಮಗುವು ಇನ್ನೂ ಬದುಕಿರುವಾಗ ನಾವು ಅವನ ಸಂಗಡ ಮಾತನಾಡುವಾಗ ಅವನು ನಮ್ಮ ಮಾತನ್ನು ಕೇಳದೆಹೋದನು. ಈಗ ಮಗುವು ಸತ್ತುಹೋಯಿ ತೆಂದು ನಾವು ಅವನಿಗೆ ಹೇಳಿದರೆ ಇನ್ನೂ ಎಷ್ಟು ಸಂಕಟಪಡುವನೋ ಅಂದುಕೊಂಡರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಏಳನೆಯ ದಿನದಲ್ಲಿ ಮಗುವು ಸತ್ತಿತು; ಅವನ ಸೇವಕರು ಭಯಪಟ್ಟು ಈ ವರ್ತಮಾನವನ್ನು ದಾವೀದನಿಗೆ ತಿಳಿಸಲಿಲ್ಲ. ಅವರು - ಹುಡುಗನು ಜೀವದಿಂದಿದ್ದಾಗಲೇ ಅವನು ನಮ್ಮ ಸಂತೈಸುವಿಕೆಯನ್ನು ಲಕ್ಷಿಸಲಿಲ್ಲ. ಹೀಗಿರುವಲ್ಲಿ ಮಗುವಿನ ಮರಣವಾರ್ತೆಯನ್ನು ಅವನಿಗೆ ತಿಳಿಸಿದರೆ ಅವನು ತನಗೆ ಏನಾದರೂ ಕೇಡುಮಾಡಿಕೊಂಡಾನಲ್ಲವೇ ಎಂದು ಮಾತಾಡಿಕೊಳ್ಳುತ್ತಿದ್ದರು.
Kannada Bible (KNCL) BSI 2016
ಏಳನೆಯ ದಿನದಲ್ಲಿ ಮಗು ಸತ್ತಿತು. ಅವನ ಸೇವಕರು ಭಯಪಟ್ಟು ಈ ವರ್ತಮಾನವನ್ನು ದಾವೀದನಿಗೆ ತಿಳಿಸಲಿಲ್ಲ. ಅವರು, “ಹುಡುಗನು ಜೀವದಿಂದಿದ್ದಾಗಲೇ ಅವರು ನಮ್ಮ ಸಂತಾಪವನ್ನು ಲಕ್ಷಿಸಲಿಲ್ಲ. ಹೀಗಿರುವಲ್ಲಿ ಮಗುವಿನ ಮರಣವಾರ್ತೆಯನ್ನು ಅವರಿಗೆ ತಿಳಿಸಿದರೆ ಅವರು ತನಗೆ ಏನಾದರೂ ಕೇಡುಮಾಡಿಕೊಂಡಾರಲ್ಲವೇ?”, ಎಂದು ಮಾತಾಡಿಕೊಳ್ಳುತ್ತಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮಗುವು ಏಳನೆಯ ದಿವಸ ಸತ್ತು ಹೋಯಿತು. ಆಗ ಮಗುವು ಸತ್ತು ಹೋಯಿತೆಂದು ದಾವೀದನ ಸೇವಕರು ಅವನಿಗೆ ತಿಳಿಸುವುದಕ್ಕೆ ಭಯಪಟ್ಟರು. ಏಕೆಂದರೆ, “ಮಗುವು ಇನ್ನೂ ಬದುಕಿರುವಾಗ, ನಾವು ಅವನ ಸಂಗಡ ಮಾತನಾಡಿದಾಗ, ಅವನು ನಮ್ಮ ಮಾತನ್ನು ಕೇಳದೆ ಹೋದನು. ಈಗ ಮಗುವು ಸತ್ತು ಹೋಯಿತೆಂದು ನಾವು ಅವನಿಗೆ ಹೇಳಿದರೆ, ಅವನು ತನಗೆ ಏನಾದರೂ ಕೇಡುಮಾಡಿಕೊಳ್ಳುವನೋ?” ಎಂದುಕೊಂಡರು.