2 Samuel 12:19 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದರೆ ದಾವೀದನು ತನ್ನ ಸೇವಕರು ಗುಸುಗುಸು ಮಾತನಾಡುವುದನ್ನು ಕೇಳಿ, ಮಗು ಸತ್ತಿದೆಯೆಂಬುದನ್ನು ಅರ್ಥಮಾಡಿಕೊಂಡನು. ಆದ್ದರಿಂದ ದಾವೀದನು ತನ್ನ ಸೇವಕರನ್ನು ಕರೆದು, “ಮಗು ಸತ್ತುಹೋಯಿತೇ?” ಎಂದು ಕೇಳಿದನು. “ಹೌದು, ಸತ್ತುಹೋಯಿತು” ಎಂದು ಸೇವಕರು ಉತ್ತರಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸೇವಕರು ಈ ಪ್ರಕಾರ ಪಿಸುಗುಟ್ಟುವುದನ್ನು ಕಂಡು ದಾವೀದನು, ಮಗು ಸತ್ತು ಹೋಯಿತೆಂದು ತಿಳಿದು ಸೇವಕರನ್ನು, “ಮಗು ಸತ್ತುಹೋಯಿತೋ?” ಎಂದು ಕೇಳಿದನು. ಅವರು, “ಹೌದು ಸತ್ತುಹೋಯಿತು” ಎಂದು ಉತ್ತರ ಕೊಟ್ಟರು
Kannada BSI Bible 2016
ಆದರೆ ತನ್ನ ಸೇವಕರು ಪಿಸುಗುಟ್ಟುವದನ್ನು ದಾವೀದನು ನೋಡಿ ಮಗುವು ಸತ್ತುಹೋಯಿತೆಂದು ಗ್ರಹಿಸಿ ಕೊಂಡನು. ಆಗ ದಾವೀದನು ತನ್ನ ಸೇವಕರಿಗೆ--ಮಗುವು ಸತ್ತುಹೋಯಿತೋ ಅಂದನು. ಅವರು --ಸತ್ತುಹೋಯಿತು ಅಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸೇವಕರು ಈ ಪ್ರಕಾರ ಗುಜುಗುಜು ಮಾತಾಡುವದನ್ನು ದಾವೀದನು ಕಂಡು ಮಗುವು ಮೃತಿಹೊಂದಿತೆಂದು ತಿಳಿದು ಸೇವಕರನ್ನು - ಮಗುವು ಸತ್ತಿತೋ ಎಂದು ಕೇಳಿದನು. ಅವರು - ಹೌದು, ಸತ್ತಿತು ಎಂದು ಉತ್ತರಕೊಟ್ಟರು.
Kannada Bible (KNCL) BSI 2016
ಸೇವಕರು ಈ ಪ್ರಕಾರ ಗುಜುಗುಜು ಮಾತಾಡುವುದನ್ನು ದಾವೀದನು ಕಂಡು ಮಗು ಸತ್ತು ಹೋಯಿತೆಂದು ತಿಳಿದು, ಸೇವಕರನ್ನು, “ಮಗು ತೀರಿಕೊಂಡಿತೋ?,” ಎಂದು ಕೇಳಿದನು. ಅವರು “ಹೌದು, ತೀರಿಕೊಂಡಿತು,” ಎಂದು ಉತ್ತರಕೊಟ್ಟರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ದಾವೀದನು ತನ್ನ ಸೇವಕರು ಪಿಸುಗುಟ್ಟುವುದನ್ನು ಕಂಡು, ಮಗು ಸತ್ತು ಹೋಯಿತೆಂದು ಗ್ರಹಿಸಿಕೊಂಡನು. ದಾವೀದನು ತನ್ನ ಸೇವಕರಿಗೆ, “ಮಗುವು ಸತ್ತು ಹೋಯಿತೋ?” ಎಂದನು. ಅವರು, “ಸತ್ತು ಹೋಯಿತು,” ಎಂದರು.