2 Samuel 12:21 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ದಾವೀದನ ಸೇವಕರು ಅವನಿಗೆ, “ನೀನು ಹೀಗೇಕೆ ಮಾಡುತ್ತಿರುವೆ? ಮಗುವು ಇನ್ನೂ ಜೀವಂತವಾಗಿದ್ದಾಗ ನೀನು ಊಟಮಾಡಲಿಲ್ಲ. ನೀನು ಗೋಳಾಡಿದೆ, ಆದರೆ ಮಗುವು ಸತ್ತಮೇಲೆ ನೀನು ಮೇಲಕ್ಕೆದ್ದು ಊಟ ಮಾಡಿದೆ?” ಎಂದು ಕೇಳಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇದನ್ನು ನೋಡಿ ಅವನ ಸೇವಕರು ಅವನಿಗೆ, “ಇದೇನು ನೀನು ಮಾಡಿದ್ದು? ಹುಡುಗನು ಜೀವದಿಂದಿದ್ದಾಗ ಅಳುತ್ತಾ ಉಪವಾಸಮಾಡಿದ್ದೀ. ಹುಡುಗನು ಸತ್ತ ನಂತರ ಎದ್ದು ಊಟ ಮಾಡಿರುವೆ” ಎಂದರು.
Kannada BSI Bible 2016
ಅವನ ಸೇವಕರು ಅವನಿಗೆ --ಇದೇನು ನೀನು ಮಾಡಿದ್ದು? ಮಗುವು ಜೀವದಿಂದ ಇರುವಾಗ ನೀನು ಉಪವಾಸವಾಗಿದ್ದು ಅದಕ್ಕೋಸ್ಕರ ಅಳುತ್ತಿದ್ದಿ; ಆದರೆ ಮಗುವು ಸತ್ತಮೇಲೆ ನೀನು ಎದ್ದು ರೊಟ್ಟಿಯನ್ನು ತಿಂದಿ ಅಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇದನ್ನು ನೋಡಿ ಅವನ ಸೇವಕರು ಅವನಿಗೆ - ಇದೇನು ನೀನು ಮಾಡಿದ್ದು? ಹುಡುಗನು ಜೀವದಿಂದಿದ್ದಾಗ ಅಳುತ್ತಾ ಉಪವಾಸವಾಗಿದ್ದಿ; ಹುಡುಗನು ಸತ್ತನಂತರ ಎದ್ದು ಊಟಮಾಡಿದಿ ಅಂದರು.
Kannada Bible (KNCL) BSI 2016
ಇದನ್ನು ನೋಡಿದ ಸೇವಕರು ಅವನಿಗೆ, “ಇದೇನು ನೀವು ಮಾಡಿದ್ದು? ಹುಡುಗ ಜೀವದಿಂದಿದ್ದಾಗ ಅಳುತ್ತಾ ಉಪವಾಸವಾಗಿದ್ದಿರಿ. ಹುಡುಗ ಸತ್ತ ನಂತರ ಎದ್ದು ಊಟಮಾಡಿದಿರಿ!” ಎಂದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನ ಸೇವಕರು ಅವನಿಗೆ, “ಇದು ಏನು ನೀನು ಮಾಡಿದ್ದು? ಮಗುವು ಜೀವದಿಂದ ಇರುವಾಗ, ನೀನು ಉಪವಾಸವಾಗಿದ್ದು ಅದಕ್ಕೋಸ್ಕರ ಅಳುತ್ತಿದ್ದೆ. ಆದರೆ ಮಗುವು ಸತ್ತಮೇಲೆ ನೀನು ಎದ್ದು ರೊಟ್ಟಿಯನ್ನು ತಿಂದೆ,” ಎಂದರು.