2 Samuel 12:30 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ದಾವೀದನು ಅವರ ರಾಜನ ತಲೆಯ ಮೇಲಿದ್ದ ಕಿರೀಟವನ್ನು ತೆಗೆದುಕೊಂಡನು. ಆ ಕೀರಿಟವು ಚಿನ್ನದ್ದೂ ಎಪ್ಪತ್ತೈದು ಪೌಂಡುಗಳಷ್ಟು ಭಾರವುಳ್ಳದ್ದೂ ಆಗಿತ್ತು. ಆ ಕಿರೀಟದಲ್ಲಿ ಬೆಲೆಬಾಳುವ ರತ್ನಗಳಿದ್ದವು. ಅವರು ಆ ಕೀರಿಟವನ್ನು ದಾವೀದನ ತಲೆಯ ಮೇಲೆ ಇಟ್ಟರು. ದಾವೀದನು ಆ ನಗರದಿಂದ ಅನೇಕ ಬೆಲೆಬಾಳುವ ವಸ್ತುಗಳನ್ನು ತಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇದಲ್ಲದೆ ಅವನು ಮಲ್ಕಾಮ ಮೂರ್ತಿಯ ತಲೆಯ ಮೇಲಿದ್ದ ಬಂಗಾರದ ಕಿರೀಟವನ್ನು ತೆಗೆದುಕೊಂಡನು. ಅದು ನಾಲ್ಕು ಸಾವಿರ ತೊಲೆ ತೂಕವುಳ್ಳದ್ದಾಗಿತ್ತು. ಅಲ್ಲದೆ ಅದರಲ್ಲಿ ಅಮೂಲ್ಯರತ್ನವನ್ನು ಇರಿಸಲಾಗಿತ್ತು. ಅವರು ಅದನ್ನು ದಾವೀದನ ಶಿರಸ್ಸಿನ ಮೇಲಿರಿಸಿದರು. ಆ ಪಟ್ಟಣದಿಂದ ದೊಡ್ಡ ಕೊಳ್ಳೆಯನ್ನು ತೆಗೆದುಕೊಂಡು ಹೋದರು.
Kannada BSI Bible 2016
ಅದರ ಅರಸನ ತಲೆಯಮೇಲೆ ಇದ್ದ ಕಿರೀಟವನ್ನು ತೆಗೆದುಕೊಂಡನು. ಅದು ಬಂಗಾರದ್ದಾಗಿ ಒಂದು ತಲಾಂತಿನ ತೂಕವಾಗಿತ್ತು; ರತ್ನಗಳಿಂದ ಕೆತ್ತಲ್ಪಟ್ಟಿತ್ತು. ಅದು ದಾವೀದನ ತಲೆಯ ಮೇಲೆ ಇರಿಸಲ್ಪಟ್ಟಿತು. ಇದಲ್ಲದೆ ಅವನು ಆ ಪಟ್ಟಣದಿಂದ ಬಹು ಅಧಿಕವಾಗಿ ಕೊಳ್ಳೆಯನ್ನು ತಂದನು.ಆದರೆ ಅದರಲ್ಲಿದ್ದ ಜನರನ್ನು ಅವನು ಹೊರಗೆ ತಂದು ಅವರನ್ನು ಗರಗಸ ಸಲಿಕೆ ಕೊಡ್ಲಿಯ ಕೆಲಸಕ್ಕೂ ಇಟ್ಟಿಗೆ ಭಟ್ಟಿಯ ಕೆಲಸಕ್ಕೂ ಇಟ್ಟನು. ಈ ಪ್ರಕಾರವೇ ಅಮ್ಮೊನನ ಮಕ್ಕಳ ಎಲ್ಲಾ ಪಟ್ಟಣಗಳಿಗೂ ಮಾಡಿ ದಾವೀದನೂ ಜನರೆಲ್ಲರೂ ಯೆರೂಸಲೇಮಿಗೆ ತಿರಿಗಿ ಬಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇದಲ್ಲದೆ ಅವನು ಅವರ ಮಲ್ಕಾಮಮೂರ್ತಿಯ ತಲೆಯ ಮೇಲಿದ್ದ ಬಂಗಾರದ ಕಿರೀಟವನ್ನು ತೆಗೆದುಕೊಂಡನು; ಅದು ನಾಲ್ಕು ಸಾವಿರ ತೊಲೆ ತೂಕದ್ದು. ಅದರಲ್ಲಿದ್ದ ಮಣಿಯನ್ನು ದಾವೀದನು ತನ್ನ ಶಿರಸ್ಸಿನಲ್ಲಿ ಧರಿಸಿಕೊಂಡನು. ಆ ಪಟ್ಟಣದಿಂದ ದೊಡ್ಡ ಕೊಳ್ಳೆಯನ್ನು ಒಯ್ದನು.
Kannada Bible (KNCL) BSI 2016
ಇದಲ್ಲದೆ ಅವನು ಅವರ ಮಲ್ಕಾಮ ಮೂರ್ತಿಯ ತಲೆಯ ಮೇಲಿದ್ದ ಬಂಗಾರದ ಕಿರೀಟವನ್ನು ತೆಗೆದುಕೊಂಡನು; ಅದು ಮೂವತ್ತೈದು ಕಿಲೊಗ್ರಾಂ ತೂಕದ್ದು. ಅದರಲ್ಲಿದ್ದ ರತ್ನವನ್ನು ದಾವೀದನು ತನ್ನ ಶಿರಸ್ಸಿನಲ್ಲಿ ಧರಿಸಿಕೊಂಡನು. ಆ ಪಟ್ಟಣದಿಂದ ದೊಡ್ಡ ಕೊಳ್ಳೆಯನ್ನು ಒಯ್ದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ದಾವೀದನು ಅಮ್ಮೋನಿಯರ ಅರಸನ ತಲೆಯ ಮೇಲೆ ಇದ್ದ ಕಿರೀಟವನ್ನು ಸಹ ತೆಗೆದುಕೊಂಡನು. ಅದು ಮೂವತ್ತೈದು ಕಿಲೋಗ್ರಾಂ ತೂಕದ್ದಾಗಿತ್ತು ಅದನ್ನು ಬಂಗಾರದಿಂದಲೂ, ಅಮೂಲ್ಯವಾದ ರತ್ನಗಳಿಂದಲೂ ಅಲಂಕರಿಸಲಾಗಿತ್ತು, ಆ ಕಿರೀಟವನ್ನು ದಾವೀದನ ಶಿರಸ್ಸಿನಲ್ಲಿ ಧರಿಸಲಾಯಿತು. ಆ ಪಟ್ಟಣದೊಳಗಿಂದ ಅತ್ಯಧಿಕವಾದ ಕೊಳ್ಳೆಯನ್ನೂ ತೆಗೆದುಕೊಂಡು ಬಂದನು.