2 Samuel 12:4 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಆಗ ಶ್ರೀಮಂತನ ಮನೆಗೆ ಒಬ್ಬ ಪ್ರಯಾಣಿಕನು ಬಂದನು. ಶ್ರೀಮಂತನು ಆ ಪ್ರಯಾಣಿಕನಿಗೆ ಊಟವನ್ನು ಕೊಡಲು ಇಚ್ಛಿಸಿದನು. ಆದರೆ ಶ್ರೀಮಂತನು ಆ ಪ್ರಯಾಣಿಕನಿಗೆ ಕೊಡಲು ತನ್ನ ಸ್ವಂತ ಕುರಿಗಳಿಂದಾಗಲಿ ದನಗಳಿಂದಾಗಲಿ ಯಾವುದನ್ನೇ ಆಗಲಿ ತೆಗೆದುಕೊಳ್ಳಲು ಇಚ್ಛಿಸಲಿಲ್ಲ. ಶ್ರೀಮಂತನು ಆ ಬಡವನಿಂದ ಕುರಿಮರಿಯನ್ನು ತೆಗೆದುಕೊಂಡು ಅದನ್ನು ಕೊಯ್ಯಿಸಿ ತನ್ನ ಅತಿಥಿಗಾಗಿ ಅಡಿಗೆ ಮಾಡಿಸಿದನು” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಒಂದು ದಿನ ಐಶ್ವರ್ಯವಂತನ ಮನೆಗೆ ಒಬ್ಬ ಪ್ರಯಾಣಿಕನು ಬಂದನು. ಆಗ ಐಶ್ವರ್ಯವಂತನು ತನ್ನ ಕುರಿದನಗಳಿಂದ ಏನೂ ತೆಗೆದುಕೊಳ್ಳಲು ಮನಸ್ಸಿಲ್ಲದೆ, ಆ ಬಡವನ ಹೆಣ್ಣುಕುರಿಮರಿಯನ್ನು ಹಿಡಿದು ಅತಿಥಿಗೋಸ್ಕರ ಅಡಿಗೆ ಮಾಡಿಸಿದನು” ಎಂದು ಹೇಳಿದನು.
Kannada BSI Bible 2016
ಐಶ್ವರ್ಯವುಳ್ಳ ಆ ಮನು ಷ್ಯನ ಬಳಿಗೆ ಒಬ್ಬ ಪ್ರಯಾಣಿಕನು ಬಂದಾಗ ಪ್ರಯಾಣ ಮಾಡುವವನಿಗೆ ಅಡಿಗೆಯನ್ನು ಮಾಡಿಸುವದಕ್ಕೆ ತನ್ನ ಕುರಿ ಪಶುಗಳಲ್ಲಿ ಒಂದನ್ನೂ ತಕ್ಕೊಳ್ಳ ಮನಸ್ಸಿಲ್ಲದೆ ಆ ಬಡವನ ಕುರಿಯನ್ನು ತಕ್ಕೊಂಡು ಅದನ್ನು ತನ್ನ ಬಳಿಗೆ ಬಂದ ಆ ಮನುಷ್ಯನಿಗೆ ಅಡಿಗೆಯನ್ನು ಮಾಡಿಸಿ ದನು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಒಂದು ದಿವಸ ಐಶ್ವರ್ಯವಂತನ ಮನೆಗೆ ಒಬ್ಬ ಪ್ರಯಾಣಿಕನು ಬಂದನು. ಆಗ ಐಶ್ವರ್ಯವಂತನು ತನ್ನ ಕುರಿದನಗಳಿಂದ ಏನೂ ತೆಗೆದುಕೊಳ್ಳಮನಸ್ಸಿಲ್ಲದೆ ಆ ಬಡವನ ಕುರಿಮರಿಯನ್ನು ಹಿಡಿದು ಅತಿಥಿಗೋಸ್ಕರ ಅದನ್ನು ಅಡಿಗೆ ಮಾಡಿಸಿದನು ಎಂಬದೇ.
Kannada Bible (KNCL) BSI 2016
ಒಂದು ದಿನ ಆ ಐಶ್ವರ್ಯವಂತನ ಮನೆಗೆ ಒಬ್ಬ ಪ್ರಯಾಣಿಕ ಬಂದ. ಆಗ ತನ್ನ ಕುರಿದನಗಳಿಂದ ಏನನ್ನೂ ಕೊಲ್ಲಲು ಆ ಐಶ್ವರ್ಯವಂತನಿಗೆ ಮನಸ್ಸಿಲ್ಲದೆ ಹೋಯಿತು. ಆ ಬಡವನ ಕುರಿಮರಿಯನ್ನೇ ಹಿಡಿದುಕೊಂಡು ಅತಿಥಿಗೋಸ್ಕರ ಅಡಿಗೆ ಮಾಡಿಸಿದ.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಐಶ್ವರ್ಯವಂತನ ಬಳಿಗೆ ಒಬ್ಬ ಪ್ರಯಾಣಿಕನು ಬಂದಾಗ, ಐಶ್ವರ್ಯವಂತನು ಅತಿಥಿಗಾಗಿ ಅಡಿಗೆಯನ್ನು ಮಾಡಿಸುವುದಕ್ಕೆ ತನ್ನ ಕುರಿದನಗಳಲ್ಲಿ ಒಂದನ್ನೂ ತೆಗೆದುಕೊಳ್ಳಲು ಮನಸ್ಸಿಲ್ಲದೆ, ಆ ಬಡವನ ಕುರಿಯನ್ನು ತೆಗೆದುಕೊಂಡು, ತನ್ನ ಬಳಿಗೆ ಬಂದ ಮನುಷ್ಯನಿಗೋಸ್ಕರ ಅದನ್ನು ಅಡಿಗೆ ಮಾಡಿಸಿದನು,” ಎಂದನು.