2 Samuel 13:36 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೋನಾದ್ವಾನು ಈ ಮಾತುಗಳನ್ನು ಹೇಳಿ ಮುಗಿಸುವಷ್ಟರಲ್ಲಿ ರಾಜನ ಗಂಡುಮಕ್ಕಳೆಲ್ಲರೂ ಬಂದರು. ಅವರು ಗಟ್ಟಿಯಾಗಿ ಅಳುತ್ತಿದ್ದರು. ದಾವೀದನು ಮತ್ತು ಅವನ ಸೇವಕರೆಲ್ಲ ಅಳರಾಂಭಿಸಿದರು. ಅವರೆಲ್ಲರೂ ಮತ್ತಷ್ಟು ಜೋರಾಗಿ ಗೋಳಾಡಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ರಾಜಕುಮಾರರು ಬಂದು ಗಟ್ಟಿಯಾಗಿ ಅತ್ತರು. ಅರಸನೂ ಅವನ ಸೇವಕರೂ ಬಹಳವಾಗಿ ಗೋಳಾಡಿದರು.
Kannada BSI Bible 2016
ಅವನು ಮಾತನಾಡಿ ತೀರಿಸಿದಾಗ ಇಗೋ, ಅರಸನ ಮಕ್ಕಳು ಬಂದು ಗಟ್ಟಿಯಾಗಿ ಅತ್ತರು. ಅರಸನೂ ಅವನ ಎಲ್ಲಾ ಸೇವಕರೂ ಬಹಳವಾಗಿ ಅತ್ತರು.
Kannada BSI JV (ಕನ್ನಡ ಸತ್ಯವೇದವು J.V. (BSI))
ರಾಜಕುಮಾರರು ಬಂದು ಗಟ್ಟಿಯಾಗಿ ಅಳತೊಡಗಿದರು. ಅರಸನೂ ಅವನ ಸೇವಕರೂ ಬಹಳವಾಗಿ ಗೋಳಾಡಿದರು.
Kannada Bible (KNCL) BSI 2016
ರಾಜಕುಮಾರರು ಬಂದು ಗಟ್ಟಿಯಾಗಿ ಅಳತೊಡಗಿದರು. ಅರಸನೂ ಅವನ ಸೇವಕರೂ ಬಹಳವಾಗಿ ಗೋಳಾಡಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ಮಾತನಾಡಿ ತೀರಿಸಿದಾಗ, ಅರಸನ ಪುತ್ರರು ಬಂದು ಸ್ವರವೆತ್ತಿ ಅತ್ತರು. ಅರಸನೂ, ಅವನ ಸಮಸ್ತ ಸೇವಕರೂ ಮಹಾಧ್ವನಿಯಿಂದ ಅತ್ತರು.