2 Samuel 14:13 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಗ ಆ ಸ್ತ್ರೀಯು, “ದೇವರ ಜನರ ವಿರುದ್ಧವಾಗಿ ನೀನು ಈ ಕಾರ್ಯಗಳನ್ನು ಮಾಡಲು ಯೋಚಿಸಿರುವುದಾದರೂ ಏಕೆ? ಹೌದು, ನೀನು ಕೊಟ್ಟ ತೀರ್ಪಿನ ಮೂಲಕ ನೀನು ನನ್ನನ್ನು ತಪ್ಪಿತಸ್ಥನೆಂದು ತೋರಿಸಿ ಕೊಟ್ಟಿರುವೆ. ಏಕೆಂದರೆ ನೀನು ಬಲಾತ್ಕಾರದಿಂದ ಮನೆ ಬಿಡಿಸಿದ ಮಗನನ್ನು ಮನೆಗೆ ಕರೆದು ತಂದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಕೆಯು, “ಅರಸನು ಈ ತೀರ್ಪು ಕೊಟ್ಟಿದ್ದರಿಂದ ತನ್ನನ್ನು ತಾನೇ ಅಪರಾಧಿ ಎಂದು ನಿರ್ಣಯಿಸಿದ ಹಾಗಾಯಿತು. ಅವನು ತಳ್ಳಲ್ಪಟ್ಟ ಮಗನನ್ನು ಸೇರಿಸಿಕೊಳ್ಳದೆ ಹೋಗುವುದರಿಂದ ದೇವಪ್ರಜೆಗೆ ವಿರೋಧವಾಗಿ ಆಲೋಚನೆ ಮಾಡಿದ ಹಾಗಾಯಿತು. ಅರಸನು ಹೀಗೇಕೆ ಮಾಡಬೇಕು?
Kannada BSI Bible 2016
ಆಗ ಅವನು--ಹೇಳು ಅಂದನು. ಆಗ ಆ ಸ್ತ್ರೀಯು--ದೇವರ ಜನರಿಗೆ ವಿರೋಧವಾಗಿ ಅಂಥಾ ಕಾರ್ಯವನ್ನು ನೀನು ನೆನೆಸು ವದೇನು? ಅರಸನು ತಾನು ಹೊರಡಿಸಿದವನನ್ನು ತಿರಿಗಿ ಸೇರಿಸಿಕೊಳ್ಳದೆ ಹೋದದರಿಂದ ಇದನ್ನು ಅಪರಾಧಸ್ಥನ ಹಾಗೆಯೇ ಮಾತಾಡುತ್ತಿದ್ದಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಕೆಯು - ಅರಸನು ಈ ತೀರ್ಪುಕೊಟ್ಟದ್ದರಿಂದ ತನ್ನನ್ನೇ ಅಪರಾಧಿಯೆಂದು ನಿರ್ಣಯಿಸಿದ ಹಾಗಾಯಿತು. ಅವನು ತಳ್ಳಲ್ಪಟ್ಟವನನ್ನು ಸೇರಿಸಿಕೊಳ್ಳಲೊಲ್ಲದೆ ಹೋಗುವದರಿಂದ ದೇವಪ್ರಜೆಗೆ ವಿರೋಧವಾಗಿ ಅದೇ ಆಲೋಚನೆ ಮಾಡಿದ ಹಾಗಾಯಿತು. ಅರಸನು ಹೀಗೇಕೆ ಮಾಡಬೇಕು?
Kannada Bible (KNCL) BSI 2016
ಆಕೆ, “ಅರಸರು ಈ ತೀರ್ಪು ಕೊಟ್ಟದ್ದರಿಂದ ತಮ್ಮನ್ನೇ ಅಪರಾಧಿಯೆಂದು ನಿರ್ಣಯಿಸಿದ ಹಾಗಾಯಿತು. ತಾವು ಹೊರದೂಡಲಾದವನನ್ನು ಸೇರಿಸಿಕೊಳ್ಳಲೊಲ್ಲದೆ ಇರುವುದರಿಂದ ದೇವಪ್ರಜೆಗೆ ವಿರೋಧ ಆಗಿ ಅದೇ ಆಲೋಚನೆ ಮಾಡಿದ ಹಾಗಾಯಿತು. ಅರಸರು ಹೀಗೇಕೆ ಮಾಡಬೇಕು? ನಾವು ಸಾಯುವವರು:
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಆ ಸ್ತ್ರೀಯು, “ಹಾಗಾದರೆ, ಏಕೆ ದೇವಜನರಿಗೆ ವಿರೋಧವಾಗಿ ಅಂಥಾ ಕಾರ್ಯವನ್ನು ನೀನು ನಡೆಸುವುದೇನು? ಅರಸನು ತಾನು ಬಹಿಷ್ಕರಿಸಿದ ಮಗನನ್ನು ತಿರುಗಿ ಸೇರಿಸಿಕೊಳ್ಳದೆ ಹೋದದ್ದರಿಂದ, ತನ್ನನ್ನು ತಾನೇ ಅಪರಾಧಿ ಎಂದು ತೀರ್ಪುಮಾಡಿದ ಹಾಗಾಯಿತು.