2 Samuel 14:20 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಈ ವಿಷಯಗಳ ಬಗ್ಗೆ ನಿಮ್ಮ ದೃಷ್ಟಿಯು ಬದಲಾಗಲೆಂಬುದಕ್ಕಾಗಿ ಯೋವಾಬನು ಹೀಗೆ ಮಾಡಿದನು. ನನ್ನ ಒಡೆಯನೇ, ನೀನು ದೇವದೂತನಂತೆ ಬುದ್ಧಿವಂತನಾಗಿರುವೆ. ಈ ಲೋಕದಲ್ಲಿ ನಡೆಯುತ್ತಿರುವುದೆಲ್ಲವನ್ನೂ ನೀನು ತಿಳಿದಿರುವೆ” ಎಂದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಬ್ಷಾಲೋಮನು ನಡೆದಿರುವ ಘಟನೆಯಿಂದ ಅರಸನು ಕೋಪಗೊಳ್ಳದೆ ಇರುವಂತೆ ವಿಷಯವನ್ನು ಈ ರೀತಿ ಹೇಳುವಂತೆ ನಿನ್ನ ಸೇವಕನಾದ ಯೋವಾಬನೇ ಇದನ್ನು ಕಲಿಸಿದನು. ಆದರೆ ನನ್ನ ಒಡೆಯನು ದೇವದೂತನಂಥ ಜ್ಞಾನಿ. ಅವನು ಭೂಲೋಕದಲ್ಲಿ ನಡೆಯುವುದನ್ನೆಲ್ಲಾ ತಿಳಿದುಕೊಳ್ಳುವನು” ಎಂದು ಉತ್ತರಕೊಟ್ಟಳು.
Kannada BSI Bible 2016
ಈ ಮಾತಿನ ರೂಪವನ್ನು ತಿರುಗಿಸುವದಕ್ಕೆ ನಿನ್ನ ಸೇವಕನಾದ ಯೋವಾಬನು ಇದನ್ನು ಮಾಡಿದ್ದಾನೆ. ಆದರೆ ಭೂಮಿ ಯಲ್ಲಿ ನಡಿಯುವದನ್ನೆಲ್ಲಾ ತಿಳಿಯುವದಕ್ಕೆ ದೇವ ದೂತನ ಜ್ಞಾನದ ಹಾಗೆಯೇ ನನ್ನ ಒಡೆಯನು ಜ್ಞಾನವುಳ್ಳವನಾಗಿದ್ದಾನೆ ಅಂದಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಬ್ಷಾಲೋಮನ ವಿಷಯವನ್ನು ರೂಪಾಂತರಪಡಿಸುವದಕ್ಕೋಸ್ಕರ ನಿನ್ನ ಸೇವಕನಾದ ಯೋವಾಬನೇ ಇದನ್ನು ಮಾಡಿದನು. ನನ್ನ ಒಡೆಯನು ದೇವದೂತನಂಥ ಜ್ಞಾನಿಯು; ಅವನು ಭೂಲೋಕದಲ್ಲಿ ನಡೆಯುವದನ್ನೆಲ್ಲಾ ತಿಳುಕೊಳ್ಳುವನು ಎಂದು ಉತ್ತರಕೊಟ್ಟಳು.
Kannada Bible (KNCL) BSI 2016
ಅಬ್ಷಾಲೋಮನ ವಿಷಯವನ್ನು ರೂಪಾಂತರ ಪಡಿಸುವುದಕ್ಕಾಗಿ ನಿಮ್ಮ ಸೇವಕನಾದ ಯೋವಾಬನೇ ಇದನ್ನು ಮಾಡಿದನು. ನನ್ನ ಒಡೆಯರು ದೇವದೂತನಂಥ ಜ್ಞಾನಿ; ಅವರು ಭೂಲೋಕದಲ್ಲಿ ನಡೆಯುವುದನ್ನೆಲ್ಲಾ ತಿಳಿದುಕೊಳ್ಳುತ್ತಾರೆ!” ಎಂದು ಉತ್ತರಕೊಟ್ಟಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಈ ಮಾತನ್ನು ರೂಪಕವಾಗಿ ತಿರುಗಿಸುವುದಕ್ಕೆ ನಿನ್ನ ಸೇವಕನಾದ ಯೋವಾಬನು ಇದನ್ನು ಮಾಡಿದ್ದಾನೆ. ಆದರೆ ಭೂಮಿಯಲ್ಲಿ ನಡೆಯುವುದನ್ನೆಲ್ಲಾ ತಿಳಿದುಕೊಳ್ಳುವುದಕ್ಕೆ ದೇವದೂತನ ಜ್ಞಾನದ ಹಾಗೆಯೇ ನನ್ನ ಒಡೆಯನು ಜ್ಞಾನವುಳ್ಳವನಾಗಿದ್ದಾನೆ,” ಎಂದಳು.