2 Samuel 14:26 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಪ್ರತಿ ವರ್ಷಾಂತ್ಯದಲ್ಲಿಯೂ ಅಬ್ಷಾಲೋಮನು ತನ್ನ ತಲೆಕೂದಲನ್ನು ಕತ್ತರಿಸಿ ಅದನ್ನು ತೂಕ ಮಾಡಿಸುತ್ತಿದ್ದನು. ಅವನ ತಲೆಕೂದಲು ಐದು ಪೌಂಡುಗಳಷ್ಟು ಭಾರವಾಗಿರುತ್ತಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನ ತಲೆಯ ಕೂದಲು ಬಹು ಭಾರವಾದ್ದರಿಂದ ಪ್ರತಿ ವರ್ಷದ ಅಂತ್ಯದಲ್ಲಿ ಬೋಳಿಸಿಕೊಳ್ಳುತ್ತಿದ್ದನು. ಆಗ ಅವನ ಕೂದಲು ರಾಜರ ತೂಕದ ಪ್ರಕಾರ ಇನ್ನೂರು ರೂಪಾಯಿ ತೂಕವಾಗುತ್ತಿತ್ತು.
Kannada BSI Bible 2016
ಅವನು ತನ್ನ ತಲೆಯ ಕೂದಲು ಭಾರವಾಗಿದೆ ಎಂದು ಪ್ರತಿವರುಷದ ಕೊನೆಯಲ್ಲಿ ಬೋಳಿಸಿಕೊಳ್ಳುವನು; ಬೋಳಿಸಿಕೊಳ್ಳುವಾಗ ಅವನ ತಲೆಯ ಕೂದಲು ಅರಸನ ತೂಕದ ಪ್ರಕಾರ ಇನ್ನೂರು ಶೆಕೇಲು ತೂಕವಾಗಿರುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು ತಲೆಗೂದಲು ಬಹುಭಾರವಾಗುವದರಿಂದ ಪ್ರತಿ ವರುಷದ ಅಂತ್ಯದಲ್ಲಿ ಬೋಳಿಸಿಕೊಳ್ಳುವನು. ಆಗ ಅವನ ಕೂದಲು ಸರಕಾರೀ ತೂಕದ ಪ್ರಕಾರ ಇನ್ನೂರು ರೂಪಾಯಿ ತೂಕವಾಗುತ್ತಿತ್ತು.
Kannada Bible (KNCL) BSI 2016
ಅವನ ತಲೆಗೂದಲು ಬಹುಭಾರವಾಗುತ್ತಿದ್ದುದರಿಂದ ಪ್ರತಿವರ್ಷದ ಅಂತ್ಯದಲ್ಲಿ ಬೋಳಿಸಿಕೊಳ್ಳುತ್ತಿದ್ದನು. ಆಗ ಅವನ ತಲೆಗೂದಲು ಸರಕಾರೀ ತೂಕದ ಪ್ರಕಾರ ಎರಡು ಕಿಲೋಗ್ರಾಂ ತೂಕವಾಗುತ್ತಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ತನ್ನ ತಲೆಯ ಕೂದಲು ಭಾರವಾಗಿದೆ ಎಂದು ಪ್ರತಿವರ್ಷದ ಕೊನೆಯಲ್ಲಿ ಬೋಳಿಸಿಕೊಳ್ಳುತ್ತಿದ್ದನು. ಬೋಳಿಸಿಕೊಳ್ಳುವಾಗ ಅವನ ತಲೆಯ ಕೂದಲು ರಾಜರ ತೂಕದ ಪ್ರಕಾರ ಎರಡು ಕಿಲೋಗ್ರಾಂ ತೂಕವಾಗಿರುತ್ತಿತ್ತು.