2 Samuel 14:31 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಗ ಯೋವಾಬನು ಅಬ್ಷಾಲೋಮನ ಮನೆಗೆ ಬಂದನು. ಯೋವಾಬನು ಅಬ್ಷಾಲೋಮನಿಗೆ, “ನಿನ್ನ ಸೇವಕರು ನನ್ನ ಹೊಲವನ್ನು ಏಕೆ ಸುಟ್ಟರು?” ಎಂದು ಕೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಯೋವಾಬನು ಅಬ್ಷಾಲೋಮನ ಮನೆಗೆ ಹೋಗಿ, “ನಿನ್ನ ಸೇವಕರು ನನ್ನ ಹೊಲಕ್ಕೆ ಬೆಂಕಿ ಹಚ್ಚಿದ್ದೇಕೆ?” ಎಂದು ಅವನನ್ನು ಕೇಳಿದನು.
Kannada BSI Bible 2016
ಆಗ ಯೋವಾಬನು ಎದ್ದು ಅಬ್ಷಾಲೋಮನ ಮನೆಗೆ ಬಂದು ಅವನಿಗೆ--ನನ್ನ ಹೊಲವನ್ನು ನಿನ್ನ ಸೇವಕರು ಬೆಂಕಿಯಿಂದ ಸುಟ್ಟುಬಿಟ್ಟದ್ದೇನು ಎಂದು ಕೇಳಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಯೋವಾಬನು ಅಬ್ಷಾಲೋಮನ ಮನೆಗೆ ಹೋಗಿ - ನಿನ್ನ ಸೇವಕರು ನನ್ನ ಹೊಲಕ್ಕೆ ಬೆಂಕಿಹಚ್ಚಿದ್ದೇಕೆ ಎಂದು ಅವನನ್ನು ಕೇಳಲು
Kannada Bible (KNCL) BSI 2016
ಆಗ ಯೋವಾಬನು ಅಬ್ಷಾಲೋಮನ ಮನೆಗೆ ಹೋಗಿ, “ನಿನ್ನ ಸೇವಕರು ನನ್ನ ಹೊಲಕ್ಕೆ ಬೆಂಕಿಹಚ್ಚಿದ್ದೇಕೆ?” ಎಂದು ಅವನನ್ನು ಕೇಳಲು
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಯೋವಾಬನು ಎದ್ದು ಅಬ್ಷಾಲೋಮನ ಮನೆಗೆ ಬಂದು ಅವನಿಗೆ, “ನನ್ನ ಹೊಲವನ್ನು ನಿನ್ನ ಸೇವಕರು ಬೆಂಕಿಯಿಂದ ಸುಟ್ಟುಬಿಟ್ಟಿದ್ದೇಕೆ?” ಎಂದು ಕೇಳಿದನು.