2 Samuel 15:21 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅದಕ್ಕೆ ಇತ್ತೈಯನು ರಾಜನಿಗೆ, “ಯೆಹೋವನಾಣೆ ಮತ್ತು ನಿನ್ನಾಣೆ, ನಾನಂತೂ ನಿನ್ನೊಂದಿಗೆ ಇರುತ್ತೇನೆ. ನನಗೆ ಜೀವ ಹೋದರೂ ಉಳಿದರೂ ನಿನ್ನೊಂದಿಗೆ ಇರುತ್ತೇನೆ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದಕ್ಕೆ ಇತ್ತೈ, “ಯೆಹೋವನಾಣೆ, ನನ್ನ ಒಡೆಯನಾದ ಅರಸನ ಜೀವದಾಣೆ, ಪ್ರಾಣ ಹೋದರೂ, ಉಳಿದರೂ ನನ್ನ ಒಡೆಯನಾದ ಅರಸನು ಇರುವಲ್ಲೇ ಇರುವೆನು” ಎಂದು ಉತ್ತರಕೊಟ್ಟನು.
Kannada BSI Bible 2016
ಆದರೆ ಇತ್ತೈಯು ಅರಸನಿಗೆ ಪ್ರತ್ಯುತ್ತರವಾಗಿ--ಕರ್ತನ ಜೀವ ದಾಣೆ, ಅರಸನಾದ ನನ್ನ ಒಡೆಯನ ಜೀವದಾಣೆ--ಸಾವಾದರೂ ಬದುಕುವದಾದರೂ ಅರಸನಾದ ನನ್ನ ಒಡೆಯನು ಎಲ್ಲಿ ಇರುವನೋ ನಿಶ್ಚಯವಾಗಿ ಅಲ್ಲಿ ನಿನ್ನ ಸೇವಕನು ಇರುವನು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದಕ್ಕೆ ಇತ್ತೈ - ಯೆಹೋವನಾಣೆ, ನನ್ನ ಒಡೆಯನಾದ ಅರಸನ ಜೀವದಾಣೆ, ಜೀವಹೋದರೂ ಉಳಿದರೂ ನನ್ನ ಒಡೆಯನಾದ ಅರಸನಿರುವಲ್ಲಿಗೆ ಹೋಗುವೆನು ಎಂದು ಉತ್ತರಕೊಟ್ಟನು.
Kannada Bible (KNCL) BSI 2016
ಅದಕ್ಕೆ ಇತ್ತೈ, “ಸರ್ವೇಶ್ವರನಾಣೆ, ನನ್ನ ಒಡೆಯರಾದ ಅರಸರ ಜೀವದಾಣೆ, ಪ್ರಾಣಹೋದರೂ ಉಳಿದರೂ ನನ್ನ ಒಡೆಯರಾದ ಅರಸರಿರುವಲ್ಲಿಗೇ ಹೋಗುವೆನು,” ಎಂದು ಉತ್ತರಕೊಟ್ಟನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಇತ್ತೈಯೂ ಅರಸನಿಗೆ ಉತ್ತರವಾಗಿ, “ಯೆಹೋವ ದೇವರ ಜೀವದಾಣೆ, ಅರಸನಾದ ನನ್ನ ಒಡೆಯನ ಜೀವದಾಣೆ, ಅರಸನಾದ ನನ್ನ ಒಡೆಯನು ಎಲ್ಲಿ ಇರುವನೋ, ಸಾವಾದರೂ ಬದುಕಾದರೂ ನಿಶ್ಚಯವಾಗಿ ಅಲ್ಲಿ ನಿನ್ನ ಸೇವಕನು ಇರುವನು,” ಎಂದನು.