2 Samuel 15:29 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದ್ದರಿಂದ ಚಾದೋಕನು ಮತ್ತು ಎಬ್ಯಾತಾರನು ದೇವರ ಪವಿತ್ರ ಪೆಟ್ಟಿಗೆಯನ್ನು ಹೊತ್ತುಕೊಂಡು ಜೆರುಸಲೇಮಿಗೆ ಹಿಂದಿರುಗಿ, ಅಲ್ಲಿಯೇ ಉಳಿದುಕೊಂಡರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಚಾದೋಕನೂ ಮತ್ತು ಎಬ್ಯಾತಾರನೂ ದೇವರ ಮಂಜೂಷವನ್ನು ಯೆರೂಸಲೇಮಿಗೆ ತೆಗೆದುಕೊಂಡು ಹೋಗಿ ಅಲ್ಲೇ ವಾಸ ಮಾಡಿದರು.
Kannada BSI Bible 2016
ಹಾಗೆಯೇ ಚಾದೋಕನೂ ಎಬ್ಯಾತಾರನೂ ದೇವರ ಮಂಜೂಷವನ್ನು ತಿರಿಗಿ ಯೆರೂಸಲೇಮಿಗೆ ತಕ್ಕೊಂಡು ಹೋಗಿ ಅಲ್ಲಿದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಚಾದೋಕನೂ ಎಬ್ಯಾತಾರನೂ ದೇವರ ಮಂಜೂಷವನ್ನು ಯೆರೂಸಲೇವಿುಗೆ ಒಯ್ದು ಅಲ್ಲೇ ವಾಸಿಸಿದರು.
Kannada Bible (KNCL) BSI 2016
ಆಗ ಚಾದೋಕನು ಹಾಗು ಎಬ್ಯಾತಾರನು ದೇವರ ಮಂಜೂಷವನ್ನು ಜೆರುಸಲೇಮಿಗೆ ಕೊಂಡೊಯ್ದು ಅಲ್ಲೇ ವಾಸಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹಾಗೆಯೇ ಚಾದೋಕನೂ, ಅಬಿಯಾತರನೂ ದೇವರ ಮಂಜೂಷವನ್ನು ತಿರುಗಿ ಯೆರೂಸಲೇಮಿಗೆ ತೆಗೆದುಕೊಂಡುಹೋಗಿ ಅಲ್ಲಿದ್ದರು.