2 Samuel 15:3 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಗ ಅಬ್ಷಾಲೋಮನು ಆ ಮನುಷ್ಯನಿಗೆ, “ನೋಡು, ನಿನ್ನ ಬೇಡಿಕೆಗಳು ಸರಿಯಾಗಿವೆ. ಆದರೆ ರಾಜನಾದ ದಾವೀದನು ನಿನ್ನ ಮಾತುಗಳನ್ನು ಕೇಳುವುದಿಲ್ಲ” ಎಂದು ಹೇಳುತ್ತಿದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಅಬ್ಷಾಲೋಮನು, “ನೋಡಿ ನಿಮ್ಮ ಕಾರ್ಯವು ಒಳ್ಳೆಯದೂ, ನ್ಯಾಯವಾದದ್ದೂ ಆಗಿದೆ. ಆದರೆ ವ್ಯಾಜ್ಯಗಳನ್ನು ವಿಚಾರಿಸುವುದಕ್ಕೆ ಅರಸನಿಂದ ಯಾರೂ ನೇಮಕವಾಗಿಲ್ಲ.
Kannada BSI Bible 2016
ಅದಕ್ಕವನು--ನಿನ್ನ ಸೇವಕನು ಇಸ್ರಾಯೇಲ್‌ ಗೋತ್ರಗಳಲ್ಲಿ ಒಬ್ಬನೆಂದು ಹೇಳಿದರೆ ಅಬ್ಷಾಲೋ ಮನು ಅವನಿಗೆ--ನೋಡು, ನಿನ್ನ ಕಾರ್ಯಗಳು ಒಳ್ಳೆಯವೂ ಯುಕ್ತವೂ ಆದವುಗಳು; ಆದರೆ ಅರಸನ ಬಳಿಯಲ್ಲಿ ನಿನ್ನನ್ನು ವಿಚಾರಿಸುವದಕ್ಕೆ ಯಾವನೂ ಇಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಅಬ್ಷಾಲೋಮನು - ನೋಡು, ನಿನ್ನ ಕಾರ್ಯವು ಒಳ್ಳೇದೂ ನ್ಯಾಯವಾದದ್ದೂ ಆಗಿದೆ; ಆದರೆ ವ್ಯಾಜ್ಯಗಳನ್ನು ವಿಚಾರಿಸುವದಕ್ಕೆ ಅರಸನಿಂದ ಒಬ್ಬನೂ ನೇಮಕವಾಗಿಲ್ಲ.
Kannada Bible (KNCL) BSI 2016
ಆಗ ಅಬ್ಷಾಲೋಮನು‍, “ನೋಡಿ, ನಿಮ್ಮ ವ್ಯಾಜ್ಯ ಒಳ್ಳೆಯದು ಹಾಗು ನ್ಯಾಯವಾದದ್ದು. ಆದರೆ ವ್ಯಾಜ್ಯಗಳನ್ನು ವಿಚಾರಿಸುವುದಕ್ಕೆ ರಾಜಪ್ರತಿನಿಧಿ ಒಬ್ಬನೂ ನೇಮಕವಾಗಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅಬ್ಷಾಲೋಮನು ಅವನಿಗೆ, “ನೋಡು ನಿನ್ನ ಕಾರ್ಯವು ಒಳ್ಳೆಯದೂ, ನ್ಯಾಯವಾದದದ್ದೂ ಆಗಿದೆ. ಆದರೆ ಅರಸನ ಬಳಿಯಲ್ಲಿ ನಿನ್ನನ್ನು ವಿಚಾರಿಸುವುದಕ್ಕೆ ಯಾವನೂ ಇಲ್ಲ,” ಅನ್ನುವನು.