2 Samuel 15:4 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅಲ್ಲದೆ ಅಬ್ಷಾಲೋಮನು, “ಯಾರಾದರೂ ನನ್ನನ್ನು ಈ ದೇಶದಲ್ಲಿ ನ್ಯಾಯಾಧೀಶನನ್ನಾಗಿ ಮಾಡಿದ್ದರೆ ಒಳ್ಳೆಯದಾಗುತ್ತಿತ್ತು. ತೀರ್ಪಿಗಾಗಿ ತಮ್ಮ ತೊಂದರೆಗಳೊಂದಿಗೆ ಬರುವ ಪ್ರತಿಯೊಬ್ಬನಿಗೂ ಆಗ ನಾನು ಸಹಾಯ ಮಾಡಬಹುದಾಗಿತ್ತು. ಅವನ ತೊಂದರೆಗೆ ತೃಪ್ತಿಕರವಾದ ಪರಿಹಾರವನ್ನು ನೀಡಲು ನಾನು ಸಹಾಯ ಮಾಡಬಹುದಾಗಿತ್ತು” ಎಂದು ಹೇಳುತ್ತಿದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ವ್ಯಾಜ್ಯವಾಗಲಿ, ಬಿನ್ನಹವಾಗಲಿ ಉಳ್ಳವರು ಬಂದು ನ್ಯಾಯವನ್ನು ಪಡೆದುಕೊಳ್ಳುವ ಹಾಗೆ ನನ್ನನ್ನೇ ದೇಶದ ನ್ಯಾಯಾಧಿಪತಿಯನ್ನಾಗಿ ನೇಮಿಸಿದ್ದರೆ ಎಷ್ಟೋ ಒಳ್ಳೆಯದಾಗುತ್ತಿತ್ತು” ಎಂದು ಹೇಳುವನು.
Kannada BSI Bible 2016
ಇದಲ್ಲದೆ ಅಬ್ಷಾಲೋಮನು--ನಾನು ದೇಶದ ಮೇಲೆ ನ್ಯಾಯಾಧಿಪತಿಯಾಗಿ ಮಾಡಲ್ಪಟ್ಟಿದ್ದರೆ ಎಷ್ಟೋ ಒಳ್ಳೆಯದು; ಆಗ ವ್ಯಾಜ್ಯವಾದರೂ ನ್ಯಾಯವಿಚಾರಣೆ ಯಾದರೂ ಇದ್ದ ಪ್ರತಿ ಮನುಷ್ಯನು ನನ್ನ ಬಳಿಗೆ ಬಂದರೆ ನಾನು ಅವನಿಗೆ ನೀತಿಯಿಂದ ನ್ಯಾಯ ತೀರಿಸುವೆನು ಅನ್ನುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ವ್ಯಾಜ್ಯವಾಗಲಿ ಬಿನ್ನಹವಾಗಲಿ ಉಳ್ಳವರು ಬಂದು ನ್ಯಾಯವನ್ನು ಪಡಕೊಳ್ಳುವ ಹಾಗೆ ನನ್ನನ್ನೇ ದೇಶದ ನ್ಯಾಯಾಧಿಪತಿಯನ್ನಾಗಿ ನೇವಿುಸಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು ಎಂದು ಹೇಳುವನು.
Kannada Bible (KNCL) BSI 2016
ವ್ಯಾಜ್ಯವಾಗಲಿ ಬಿನ್ನಹವಾಗಲಿ ಉಳ್ಳವರು ಬಂದು ನ್ಯಾಯವನ್ನು ಪಡೆದುಕೊಳ್ಳುವ ಹಾಗೆ ನನ್ನನ್ನೇ ನಾಡಿನ ನ್ಯಾಯಾಧಿಪತಿಯನ್ನಾಗಿ ನೇಮಿಸಿದ್ದರೆ ಎಷ್ಟೋ ಒಳ್ಳೆಯದಾಗುತ್ತಿತ್ತು,” ಎಂದು ಸೂಚಿಸುತ್ತಿದ್ದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಅಬ್ಷಾಲೋಮನು, “ನಾನು ದೇಶದ ಮೇಲೆ ನ್ಯಾಯಾಧಿಪತಿಯಾಗಿ ನೇಮಕವಾಗಿದ್ದರೆ ಎಷ್ಟೋ ಒಳ್ಳೆಯದು. ಆಗ ವ್ಯಾಜ್ಯವಾದರೂ, ನ್ಯಾಯವಿಚಾರಣೆಯಾದರೂ ಇದ್ದ ಪ್ರತಿ ಮನುಷ್ಯನು ನನ್ನ ಬಳಿಗೆ ಬಂದರೆ, ನಾನು ಅವನಿಗೆ ನೀತಿಯಿಂದ ನ್ಯಾಯತೀರಿಸುವೆನು,” ಅನ್ನುವನು.