2 Samuel 16:2 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ರಾಜನಾದ ದಾವೀದನು ಚೀಬನಿಗೆ, “ಈ ವಸ್ತುಗಳೆಲ್ಲ ಏತಕ್ಕಾಗಿ?” ಎಂದು ಕೇಳಿದನು. ಚೀಬನು, “ಹೇಸರಕತ್ತೆಗಳನ್ನು ರಾಜನ ಕುಟುಂಬದವರು ಸವಾರಿ ಮಾಡುವುದಕ್ಕಾಗಿಯೂ ರೊಟ್ಟಿಗಳನ್ನು ಮತ್ತು ಹಣ್ಣುಗಳನ್ನು ಸೇವಕರು ತಿನ್ನುವುದಕ್ಕಾಗಿಯೂ ತಂದಿದ್ದೇನೆ. ಅರಣ್ಯದಲ್ಲಿ ಶಕ್ತಿಗುಂದಿಹೋದವನು ದ್ರಾಕ್ಷಾರಸವನ್ನು ಕುಡಿಯಲಿ” ಎಂದು ಉತ್ತರಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅರಸನು ಚೀಬನನ್ನು, “ಇವುಗಳನ್ನು ಯಾಕೆ ತಂದಿ?” ಎಂದು ಕೇಳಿದನು. ಅವನು, “ಅರಸನ ಮನೆಯವರು ಸವಾರಿಮಾಡುವುದಕ್ಕಾಗಿ ಕತ್ತೆಗಳನ್ನು, ಆಳುಗಳು ತಿನ್ನುವುದಕ್ಕಾಗಿ ಹಣ್ಣು ಮತ್ತು ರೊಟ್ಟಿಗಳನ್ನು, ಅರಣ್ಯದಲ್ಲಿ ದಣಿದವರು ಕುಡಿಯುವುದಕ್ಕಾಗಿ ದ್ರಾಕ್ಷಾರಸವನ್ನು ತಂದಿದ್ದೇನೆ” ಎಂದು ಉತ್ತರಕೊಟ್ಟನು.
Kannada BSI Bible 2016
ಅರಸನು ಚೀಬನಿಗೆ--ಇವು ಯಾಕೆ ಅಂದನು. ಅದಕ್ಕೆ ಚೀಬನು--ಕತ್ತೆಗಳು ಅರಸನ ಮನೆಯವರು ಹತ್ತುವದಕ್ಕೂ ಆ ರೊಟ್ಟಿಗಳೂ ವಸಂತಕಾಲದ ಫಲಗಳೂ ಯೌವನಸ್ಥರು ತಿನ್ನುವ ದಕ್ಕೂ ದ್ರಾಕ್ಷಾರಸವು ಅರಣ್ಯದಲ್ಲಿ ದಣಿದವರು ಕುಡಿಯುವದಕ್ಕೂ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅರಸನು ಚೀಬನನ್ನು - ಇವುಗಳನ್ನು ಯಾಕೆ ತಂದಿ ಎಂದು ಕೇಳಲು ಅವನು - ಕತ್ತೆಗಳನ್ನು ಅರಸನ ಮನೆಯವರು ಸವಾರಿಮಾಡುವದಕ್ಕಾಗಿಯೂ ಹಣ್ಣು ರೊಟ್ಟಿಗಳನ್ನು ಆಳುಗಳು ತಿನ್ನುವದಕ್ಕಾಗಿಯೂ ದ್ರಾಕ್ಷಾರಸವನ್ನು ಅರಣ್ಯದಲ್ಲಿ ದಣಿದವರು ಕುಡಿಯುವದಕ್ಕಾಗಿಯೂ ತಂದಿದ್ದೇನೆ ಎಂದು ಉತ್ತರಕೊಟ್ಟನು.
Kannada Bible (KNCL) BSI 2016
ಅರಸನು ಚೀಬನನ್ನು ನೋಡಿ, “ಇವುಗಳನ್ನು ಏಕೆ ತಂದೆ?” ಎಂದು ಕೇಳಿದನು. ಅವನು, “ಕತ್ತೆಗಳನ್ನು ಅರಸರ ಮನೆಯವರು ಸವಾರಿಮಾಡಲೆಂದು, ಹಣ್ಣು ರೊಟ್ಟಿಗಳನ್ನು ಆಳುಗಳು ತಿನ್ನಲೆಂದೂ ಹಾಗು ದ್ರಾಕ್ಷಾರಸವನ್ನು ಅರಣ್ಯದಲ್ಲಿ ದಣಿದವರು ಕುಡಿಯಲೆಂದು ತಂದಿದ್ದೇನೆ,” ಎಂದು ಉತ್ತರಕೊಟ್ಟನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅರಸನು ಚೀಬನಿಗೆ, “ಇವು ಏಕೆ,” ಎಂದನು. ಅದಕ್ಕೆ ಚೀಬನು, “ಕತ್ತೆಗಳನ್ನು ಅರಸನ ಮನೆಯವರು ಸವಾರಿಮಾಡುವುದಕ್ಕೆ, ಆ ರೊಟ್ಟಿಗಳೂ, ಬೇಸಿಗೆ ಕಾಲದ ಫಲಗಳೂ ಜನರಿಗೆ ತಿನ್ನುವುದಕ್ಕೆ, ದ್ರಾಕ್ಷಾರಸವು ಮರುಭೂಮಿಯಲ್ಲಿ ದಣಿದವರು ಕುಡಿಯುವುದಕ್ಕೆ,” ಎಂದನು.