2 Samuel 16:23 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆ ಸಮಯದಲ್ಲಿ ದಾವೀದನಿಗೆ ಮತ್ತು ಅಬ್ಷಾಲೋಮನಿಗೆ ಅಹೀತೋಫೆಲನ ಸಲಹೆಯು ಬಹಳ ಮುಖ್ಯವಾಗಿತ್ತು. ದೇವರ ವಾಕ್ಯವು ಮನುಷ್ಯನಿಗೆಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಕಾಲದಲ್ಲಿ ಅಹೀತೋಫೆಲನ ಆಲೋಚನೆಗಳಿಗೆ ದೈವೋತ್ತರಗಳಿರುವಷ್ಟು ಬೆಲೆಯಿತ್ತು. ದಾವೀದನೂ ಮತ್ತು ಅಬ್ಷಾಲೋಮನೂ ಅವನ ಆಲೋಚನೆಗಳನ್ನು ಗೌರವಿಸುತ್ತಿದ್ದರು.
Kannada BSI Bible 2016
ಆ ದಿವಸಗಳಲ್ಲಿ ಅಹೀತೋಫೆಲನು ಆಲೋಚಿಸಿದ ಆಲೋಚನೆಯು ಒಬ್ಬನು ದೈವೋಕ್ತಿಗಳನ್ನು ವಿಚಾರಿಸುವ ಹಾಗೆ ಇತ್ತು. ಅಹೀತೋಫೆಲನ ಆಲೋಚನೆಯೆಲ್ಲಾ ದಾವೀದನಿಗೂ ಅಬ್ಷಾಲೋಮನಿಗೂ ಹಾಗೆಯೇ ಇತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಕಾಲದಲ್ಲಿ ಅಹೀತೋಫೆಲನ ಆಲೋಚನೆಗಳಿಗೆ ದೈವೋತ್ತರಗಳಿಗಿರುವಷ್ಟು ಬೆಲೆಯಿತ್ತು. ದಾವೀದನೂ ಅಬ್ಷಾಲೋಮನೂ ಅವನ ಆಲೋಚನೆಗಳನ್ನು ಗೌರವಿಸುತ್ತಿದ್ದರು.
Kannada Bible (KNCL) BSI 2016
ಆ ದಿನಗಳಲ್ಲಿ ಅಹೀತೋಫೆಲನ ಆಲೋಚನೆಗಳಿಗೆ ದೈವೋತ್ತರಗಳಿಗಿರುವಷ್ಟೇ ಬೆಲೆಯಿತ್ತು. ದಾವೀದನೂ ಅಬ್ಷಾಲೋಮನೂ ಅವನ ಸಲಹೆಗಳನ್ನು ಮಾನ್ಯಮಾಡುತ್ತಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ದಿವಸಗಳಲ್ಲಿ ಅಹೀತೋಫೆಲನು ತಿಳಿಸಿದ ಆಲೋಚನೆಯು ದೇವರನ್ನು ವಿಚಾರಿಸುವ ಹಾಗೆ ಇತ್ತು. ಅಹೀತೋಫೆಲನ ಆಲೋಚನೆಗಳನ್ನು ದಾವೀದನೂ, ಅಬ್ಷಾಲೋಮನೂ ಹಾಗೆಯೇ ಗೌರವಿಸುತ್ತಿದ್ದರು.