2 Samuel 16:3 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ರಾಜನು, “ಮೆಫೀಬೋಶೆತನು ಎಲ್ಲಿ?” ಎಂದು ಕೇಳಿದನು. ಚೀಬನು ರಾಜನಿಗೆ, “ಮೆಫೀಬೋಶೆತನು ಜೆರುಸಲೇಮಿನಲ್ಲಿಯೇ ಇದ್ದಾನೆ. ಯಾಕೆಂದರೆ ‘ಇಸ್ರೇಲರು ನನ್ನ ತಾತನ ರಾಜ್ಯಾಧಿಕಾರವನ್ನು ಈ ದಿನ ನನಗೆ ಹಿಂದಕ್ಕೆ ಕೊಡುತ್ತಾರೆ’ ಎಂಬುದು ಅವನ ಆಲೋಚನೆಯಾಗಿದೆ” ಎಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅರಸನು ತಿರುಗಿ ಅವನನ್ನು, “ನಿನ್ನ ಯಜಮಾನನ ಮಗನು ಎಲ್ಲಿದ್ದಾನೆ?” ಎಂದು ಕೇಳಲು ಅವನು, “ತನ್ನ ತಂದೆಯ ರಾಜ್ಯವನ್ನು ಇಸ್ರಾಯೇಲರು ಮರಳಿ ತನಗೇ ಕೊಡುವರೆಂದು ಹೇಳಿ ಅವನು ಯೆರೂಸಲೇಮಿನಲ್ಲೇ ಉಳಿದನು” ಅಂದನು
Kannada BSI Bible 2016
ಆಗ ಅರಸನು ಅವ ನನ್ನು--ನಿನ್ನ ಯಜಮಾನನ ಕುಮಾರನು ಎಲ್ಲಿದ್ದಾ ನೆಂದು ಕೇಳಿದನು. ಚೀಬನು ಅರಸನಿಗೆ--ಇಗೋ, ಅವನು ಯೆರೂಸಲೇಮಿನಲ್ಲಿದ್ದಾನೆ. ಯಾಕಂದರೆ--ಈ ಹೊತ್ತು ಇಸ್ರಾಯೇಲಿನ ಮನೆಯವರು ನನ್ನ ತಂದೆಯ ರಾಜ್ಯವನ್ನು ನನಗೆ ತಿರಿಗಿಕೊಡುವರೆಂದು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅರಸನು ತಿರಿಗಿ ಅವನನ್ನು - ನಿನ್ನ ಯಜಮಾನನ ಮಗನು ಎಲ್ಲಿದ್ದಾನೆಂದು ಕೇಳಲು ಅವನು - ತನ್ನ ತಂದೆಯ ರಾಜ್ಯವನ್ನು ಇಸ್ರಾಯೇಲ್ಯರು ಈಹೊತ್ತು ತನಗೆ ತಿರಿಗಿ ಕೊಡುವರೆಂದು ಹೇಳಿ ಅವನು ಯೆರೂಸಲೇವಿುನಲ್ಲೇ ಉಳುಕೊಂಡನು ಅಂದನು.
Kannada Bible (KNCL) BSI 2016
ಅರಸನು ಮತ್ತೆ, “ನಿನ್ನ ಯಜಮಾನನ ಮಗ ಎಲ್ಲಿದ್ದಾನೆ?” ಎಂದು ಕೇಳಲು ಅವನು, “ತನ್ನ ತಂದೆಯ ರಾಜ್ಯವನ್ನು ಇಸ್ರಯೇಲರು ಈ ದಿನ ತನಗೆ ಮರಳಿಕೊಡುವರೆಂದು ಹೇಳಿ ಅವನು ಜೆರುಸಲೇಮಿನಲ್ಲೇ ಉಳಿದುಕೊಂಡನು,” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅರಸನು ಅವನನ್ನು, “ನಿನ್ನ ಯಜಮಾನನ ಪುತ್ರನು ಎಲ್ಲಿದ್ದಾನೆ?” ಎಂದು ಕೇಳಿದನು. ಚೀಬನು ಅರಸನಿಗೆ, “ಅವನು ಯೆರೂಸಲೇಮಿನಲ್ಲಿದ್ದಾನೆ. ಏಕೆಂದರೆ ಈ ಹೊತ್ತು ಇಸ್ರಾಯೇಲಿನ ಮನೆಯವರು ನನ್ನ ತಂದೆಯ ರಾಜ್ಯವನ್ನು ನನಗೆ ತಿರುಗಿ ಕೊಡುವರೆಂದು ಹೇಳಿಕೊಂಡನು,” ಎಂದನು.