2 Samuel 18:19 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಚಾದೋಕನ ಮಗನಾದ ಅಹೀಮಾಚನು ಯೋವಾಬನಿಗೆ, “ಈಗ ಓಡುತ್ತಾಹೋಗಿ ರಾಜನಾದ ದಾವೀದನಿಗೆ ಈ ವರ್ತಮಾನವನ್ನು ತಿಳಿಸುತ್ತೇನೆ. ಯೆಹೋವನು ನಿನ್ನ ಶತ್ರುವನ್ನು ನಾಶಮಾಡಿದನೆಂದು ನಾನು ಅವನಿಗೆ ಹೇಳುತ್ತೇನೆ” ಎಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಚಾದೋಕನ ಮಗನಾದ ಅಹೀಮಾಚನು ಯೋವಾಬನಿಗೆ, “ಅಪ್ಪಣೆಯಾಗಲಿ ನಾನು ಅರಸನ ಬಳಿಗೆ ಓಡಿಹೋಗಿ ಯೆಹೋವನು ಅವನ ವೈರಿಗಳಿಗೆ ಮುಯ್ಯಿ ತೀರಿಸಿದ್ದಾನೆಂಬ ಶುಭ ವರ್ತಮಾನವನ್ನು ತಿಳಿಸುವೆನು” ಎಂದನು.
Kannada BSI Bible 2016
ಆಗ ಚಾದೋಕನ ಮಗನಾದ ಅಹೀಮಾಚನುಕರ್ತನು ರಾಜನ ಶತ್ರುಗಳ ಮೇಲೆ ಹೇಗೆ ನ್ಯಾಯ ತೀರಿಸಿದ್ದಾನೆಂಬ ವರ್ತಮಾನಗಳನ್ನು ಅರಸನಿಗೆ ತಿಳಿ ಸುವ ಹಾಗೆ ನಾನು ಓಡಿಹೋಗುವದಕ್ಕೆ ಅಪ್ಪಣೆಯಾಗ ಬೇಕು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಚಾದೋಕನ ಮಗನಾದ ಅಹೀಮಾಚನು ಯೋವಾಬನಿಗೆ - ಅಪ್ಪಣೆಯಾಗಲಿ, ನಾನು ಅರಸನ ಬಳಿಗೆ ಓಡಿಹೋಗಿ ಯೆಹೋವನು ಅವನ ವೈರಿಗಳಿಗೆ ಮುಯ್ಯಿ ತೀರಿಸಿದ್ದಾನೆಂಬ ಶುಭವರ್ತಮಾನವನ್ನು ತಿಳಿಸುವೆನು ಅನ್ನಲು
Kannada Bible (KNCL) BSI 2016
ಚಾದೋಕನ ಮಗ ಅಹೀಮಾಚನು ಯೋವಾಬನಿಗೆ, “ಅಪ್ಪಣೆಯಾಗಲಿ, ನಾನು ಅರಸರ ಬಳಿಗೆ ಓಡಿಹೋಗಿ ಸರ್ವೇಶ್ವರಸ್ವಾಮಿ ವೈರಿಗಳಿಗೆ ಮುಯ್ಯಿತೀರಿಸಿದ್ದಾರೆಂಬ ಶುಭವರ್ತಮಾನವನ್ನು ತಿಳಿಸುತ್ತೇನೆ,” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಚಾದೋಕನ ಮಗ ಅಹೀಮಾಚನು, “ಯೆಹೋವ ದೇವರು ರಾಜನ ಶತ್ರುಗಳ ಮೇಲೆ ಹೇಗೆ ನ್ಯಾಯ ತೀರಿಸಿದ್ದಾರೆಂಬ ವರ್ತಮಾನವನ್ನು ಅರಸನಿಗೆ ತಿಳಿಸುವ ಹಾಗೆ, ನಾನು ಓಡಿ ಹೋಗುವೆನು,” ಎಂದನು.