2 Samuel 18:31 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಇಥಿಯೋಪ್ಯದವನು ಬಂದನು. ಅವನು, “ನನ್ನ ರಾಜನಾದ ಪ್ರಭುವಿಗೆ ಸುದ್ದಿಯಿದೆ, ನಿನ್ನ ವಿರುದ್ಧವಾಗಿದ್ದ ಜನರನ್ನು ಇಂದು ಯೆಹೋವನು ದಂಡಿಸಿದನು!” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಷ್ಟರಲ್ಲಿ ಕೂಷ್ಯನು ಬಂದು, “ನನ್ನ ಒಡೆಯನಾದ ಅರಸನಿಗೆ ಶುಭವರ್ತಮಾನ ತಂದಿದ್ದೇನೆ. ಯೆಹೋವನು ನಿನಗೆ ವಿರೋಧವಾಗಿ ಎದ್ದವರೆಲ್ಲರಿಗೂ ಮುಯ್ಯಿತೀರಿಸಿದ್ದಾನೆ” ಎಂದನು.
Kannada BSI Bible 2016
ಕೂಷ್ಯನು--ಅರಸ ನಾದ ನನ್ನ ಯಜಮಾನನಿಗೆ ವರ್ತಮಾನ ಉಂಟು. ಏನಂದರೆ, ಕರ್ತನು ಈ ಹೊತ್ತು ನಿನಗೆ ವಿರೋಧವಾಗಿ ಎದ್ದು ಎಲ್ಲರಿಗೂ ಮುಯ್ಯಿಗೆ ಮುಯ್ಯಿ ತೀರಿಸಿದ್ದಾನೆ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಷ್ಟರಲ್ಲಿ ಕೂಷ್ಯನೂ ಬಂದು - ನನ್ನ ಒಡೆಯನಾದ ಅರಸನಿಗೆ ಶುಭವರ್ತಮಾನ ತಂದಿದ್ದೇನೆ; ಯೆಹೋವನು ನಿನಗೆ ವಿರೋಧವಾಗಿ ಎದ್ದವರೆಲ್ಲರಿಗೂ ಮುಯ್ಯಿತೀರಿಸಿದ್ದಾನೆ ಅಂದನು.
Kannada Bible (KNCL) BSI 2016
ಅಷ್ಟರಲ್ಲಿ ಕೂಷ್ಯನೂ ಬಂದು, “ನನ್ನ ಒಡೆಯರಾದ ಅರಸರಿಗೆ ಶುಭವರ್ತಮಾನ ತಂದಿದ್ದೇನೆ; ಸರ್ವೇಶ್ವರಸ್ವಾಮಿ ನಿಮಗೆ ವಿರುದ್ಧ ಬಂಡೆದ್ದವರೆಲ್ಲರಿಗೂ ಮುಯ್ಯಿತೀರಿಸಿದ್ದಾರೆ,” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಕೂಷ್ಯನು, “ಅರಸನಾದ ನನ್ನ ಒಡೆಯನಿಗೆ ಶುಭವರ್ತಮಾನ ಉಂಟು, ಏನೆಂದರೆ ಯೆಹೋವ ದೇವರು ಈ ಹೊತ್ತು ನಿನಗೆ ವಿರೋಧವಾಗಿ ಎದ್ದು, ಸಮಸ್ತರಿಗೂ ಮುಯ್ಯಿಗೆ ಮುಯ್ಯಿ ತೀರಿಸಿದ್ದಾರೆ,” ಎಂದನು.