2 Samuel 18:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯುದ್ಧವು ದೇಶವನ್ನೆಲ್ಲ ವ್ಯಾಪಿಸಿತು. ಆದರೆ ಅಂದು ಕತ್ತಿಯಿಂದ ಸತ್ತ ಜನರಿಗಿಂತ ಹೆಚ್ಚು ಜನರು ಕಾಡಿನಲ್ಲಿ ಸತ್ತರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯುದ್ಧವು ಸುತ್ತಣ ಪ್ರದೇಶಗಳಲ್ಲಿ ಹಬ್ಬಿಕೊಂಡಿತು. ಆ ದಿನ ಕತ್ತಿಯಿಂದ ಹತರಾದವರಿಗಿಂತ ಕಾಡಿನಲ್ಲಿ ಹತರಾದವರೇ ಹೆಚ್ಚಾಗಿದ್ದರು.
Kannada BSI Bible 2016
ಆ ಹೊತ್ತು ಅಲ್ಲಿ ದೊಡ್ಡ ಸಂಹಾರವಾಯಿತು; ಇಪ್ಪತ್ತು ಸಾವಿರ ಜನರು ಬಿದ್ದರು. ಅಲ್ಲಿನ ಯುದ್ಧವು ದೇಶವೆ ಲ್ಲಾದರ ಮೇಲೆ ವಿಸ್ತರಿಸಲ್ಪಟ್ಟಿತು. ಆ ಹೊತ್ತು ಜನರಲ್ಲಿ ಕತ್ತಿಗಿಂತ ಅಡವಿಯು ಹೆಚ್ಚಾದವರನ್ನು ನುಂಗಿಬಿಟ್ಟಿತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯುದ್ಧವು ಸುತ್ತಣ ಪ್ರದೇಶಗಳಲ್ಲಿ ಹಬ್ಬಿಕೊಂಡಿತು. ಆ ದಿವಸ ಕತ್ತಿಗಿಂತ ಕಾಡೇ ಹೆಚ್ಚಿನ ಸಂಹಾರಕ್ಕೆ ಕಾರಣವಾಯಿತು.
Kannada Bible (KNCL) BSI 2016
ಯುದ್ಧವು ಸುತ್ತಣ ಪ್ರದೇಶಗಳಿಗೆ ಹಬ್ಬಿಕೊಂಡಿತು. ಆ ದಿನ ಕತ್ತಿಯಿಂದ ಸತ್ತವರಿಗಿಂತ, ಮರುಳುಗಾಡಿನಲ್ಲಿ ಸತ್ತವರ ಸಂಖ್ಯೆಯೇ ಹೆಚ್ಚಾಗಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ಹೊತ್ತು ಅಲ್ಲಿ ದೊಡ್ಡ ಸಂಹಾರವಾಯಿತು. ಇಪ್ಪತ್ತು ಸಾವಿರ ಸೈನಿಕರು ಸತ್ತರು. ಅಲ್ಲಿನ ಯುದ್ಧವು ಸುತ್ತಣ ಪ್ರದೇಶಗಳಲ್ಲಿ ಹಬ್ಬಿಕೊಂಡಿತು. ಆ ದಿನ ಸೈನಿಕರಲ್ಲಿ ಖಡ್ಗದಿಂದ ಹತರಾದವರಿಗಿಂತ ಕಾಡಿನಲ್ಲಿ ಹತರಾದವರೇ ಹೆಚ್ಚಾಗಿದ್ದರು.