2 Samuel 19:16 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಗೇರನ ಮಗನಾದ ಶಿಮ್ಮಿಯು ಬೆನ್ಯಾಮೀನ್ ಕುಲದವನು. ಅವನು ಬಹುರೀಮಿನಲ್ಲಿ ನೆಲೆಸಿದ್ದನು. ರಾಜನಾದ ದಾವೀದನನ್ನು ಭೇಟಿ ಮಾಡಲು ಶಿಮ್ಮಿಯು ತ್ವರಿತವಾಗಿ ಯೆಹೂದದ ಜನರೊಂದಿಗೆ ಬಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಬೆನ್ಯಾಮೀನ ಕುಲದ ಗೇರನ ಮಗನೂ ಬಹುರೀಮಿನವನೂ ಆದ ಶಿಮ್ಮಿಯು ಅವಸರದಿಂದ ಬಂದು ಅರಸನಾದ ದಾವೀದನನ್ನು ಎದುರುಗೊಳ್ಳುವುದಕ್ಕೆ ಯೆಹೂದ ಕುಲದವರನ್ನು ಕೂಡಿಕೊಂಡನು.
Kannada BSI Bible 2016
ಇದಲ್ಲದೆ ಬಹುರೀಮಿನವನೂ ಬೆನ್ಯಾವಿಾನ್ಯನೂ ಗೇರನ ಮಗನಾದ ಶಿಮ್ಮಿಯು ತ್ವರೆಯಾಗಿ ಯೆಹೂದ ಜನರ ಸಂಗಡ ಅರಸನಾದ ದಾವೀದನನ್ನು ಎದುರು ಗೊಳ್ಳುವದಕ್ಕೆ ಬಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಬೆನ್ಯಾಮೀನ್ ಕುಲದ ಗೇರನ ಮಗನೂ ಬಹುರೀವಿುನವನೂ ಆದ ಶಿಮ್ಮಿಯು ಅವಸರದಿಂದ ಬಂದು ಅರಸನಾದ ದಾವೀದನನ್ನು ಎದುರುಗೊಳ್ಳುವದಕ್ಕೆ ಯೆಹೂದ ಕುಲದವರನ್ನು ಕೂಡಿಕೊಂಡನು.
Kannada Bible (KNCL) BSI 2016
ಬೆನ್ಯಾಮೀನ್ ಕುಲದ ಗೇರನ ಮಗನೂ ಬಹುರೀಮಿನವನೂ ಆದ ಶಿಮ್ಮಿಯು ತವಕದಿಂದ ಬಂದು ಅರಸನಾದ ದಾವೀದನನ್ನು ಸ್ವಾಗತಿಸುವುದಕ್ಕೆ ಯೆಹೂದ ಕುಲದವರನ್ನು ಕೂಡಿಕೊಂಡನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬಹುರೀಮಿನವನೂ ಬೆನ್ಯಾಮೀನ್ಯನೂ ಗೇರನ ಮಗ ಶಿಮ್ಮಿಯು ತ್ವರೆಯಾಗಿ ಯೆಹೂದ ಜನರ ಸಂಗಡ ಅರಸ ದಾವೀದನನ್ನು ಎದುರುಗೊಳ್ಳುವುದಕ್ಕೆ ಬಂದನು.