2 Samuel 19:3 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಜನರು ನಾಚಿಕೆಯಿಂದ ನಗರದೊಳಕ್ಕೆ ಸದ್ದಿಲ್ಲದೆ ಬಂದರು. ಅವರು ಯುದ್ಧದಲ್ಲಿ ಸೋತುಬಂದವರಂತೆ ಕಾಣುತ್ತಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಜನರು ಆ ದಿನ ಯುದ್ಧದಲ್ಲಿ ಸೋತು ಓಡಿ ಬಂದವರೋ ಎಂಬಂತೆ ನಾಚಿಕೆಯಿಂದ ಕಳ್ಳತನದಿಂದ ಊರನ್ನು ಪ್ರವೇಶಿಸಿದರು.
Kannada BSI Bible 2016
ಆದ ದರಿಂದ ಜನರು ಯುದ್ಧದಲ್ಲಿ ಓಡಿಹೋಗಿ ಅವಮಾನ ಪಟ್ಟು ಕಳ್ಳತನವಾಗಿ ಬರುವ ಹಾಗೆ ಆ ದಿನದಲ್ಲಿ ಕಳ್ಳತನವಾಗಿ ಪಟ್ಟಣದೊಳಗೆ ಬಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಜನರು ಆ ದಿವಸ ಯುದ್ಧದಲ್ಲಿ ಸೋತು ಓಡಿ ಬಂದವರೋ ಎಂಬಂತೆ ನಾಚಿಕೆಯಿಂದ ಕಳ್ಳತನವಾಗಿ ಊರನ್ನು ಹೊಕ್ಕರು.
Kannada Bible (KNCL) BSI 2016
ಜನರು ಆ ದಿನದ ಯುದ್ಧದಲ್ಲಿ ಸೋತು ಓಡಿಬಂದಿರುವವರೋ ಎಂಬಂತೆ, ನಾಚಿಕೆಯಿಂದ ಕಳ್ಳತನವಾಗಿ ಊರನ್ನು ಹೊಕ್ಕರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದ್ದರಿಂದ ಜನರು ಯುದ್ಧದಲ್ಲಿ ಓಡಿಹೋಗಿ ಅವಮಾನ ಪಟ್ಟು ಬರುವ ಕಳ್ಳರ ಹಾಗೆ ಪಟ್ಟಣದೊಳಗೆ ಬಂದರು.