2 Samuel 19:42 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೂದದ ಜನರೆಲ್ಲರು ಇಸ್ರೇಲರಿಗೆ, “ಏಕೆಂದರೆ ರಾಜನು ನಮ್ಮ ಸಮೀಪದ ಬಂಧು. ಇದರ ಕುರಿತು ನೀವೇಕೆ ನಮ್ಮ ಮೇಲೆ ಕೋಪಗೊಳ್ಳುತ್ತೀರಿ? ರಾಜನ ಖರ್ಚಿನಲ್ಲೇನೂ ನಾವು ಊಟಮಾಡಲಿಲ್ಲ. ರಾಜನು ನಮಗೆ ಯಾವ ಬಹುಮಾನವನ್ನೂ ನೀಡಲಿಲ್ಲ” ಎಂದು ಉತ್ತರಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದಕ್ಕೆ ಯೆಹೂದ್ಯರು ಇಸ್ರಾಯೇಲರಿಗೆ, “ಅರಸನು ನಮಗೆ ಸಮೀಪದ ಬಂಧು. ನೀವು ಅದಕ್ಕಾಗಿ ಕೋಪಗೊಳ್ಳುವುದೇಕೆ? ನಾವೇನು ಅರಸನ ಹಣದಿಂದ ಊಟಮಾಡಿದೆವೋ? ಅವನು ನಮಗೆ ಏನಾದರೂ ಕೊಟ್ಟನೋ?” ಎಂದು ಉತ್ತರ ಕೊಟ್ಟರು.
Kannada BSI Bible 2016
ಆಗ ಯೆಹೂದ ಜನರೆಲ್ಲರೂ ಇಸ್ರಾಯೇಲ್‌ ಜನರಿಗೆ ಪ್ರತ್ಯುತ್ತರವಾಗಿ--ಅರಸನು ನಮಗೆ ಸವಿಾಪ ಬಂಧು ವಾದದರಿಂದ; ಈ ಕಾರ್ಯಕ್ಕೋಸ್ಕರ ನೀವು ಕೋಪ ವಾಗಿರುವದೇನು? ನಾವು ಅರಸನ ಖರ್ಚಿನಿಂದ ಏನಾದರೂ ಊಟ ಮಾಡಿದೆವೋ? ಅವನು ನಮಗೆ ಏನಾದರೂ ಕೊಟ್ಟನೋ ಅಂದರು.ಆದರೆ ಇಸ್ರಾ ಯೇಲ್‌ ಜನರು ಯೆಹೂದ ಜನರಿಗೆ ಪ್ರತ್ಯುತ್ತರ ವಾಗಿ--ಅರಸನಲ್ಲಿ ನಮಗೆ ಹತ್ತು ಪಾಲುಂಟು; ನಿಮಗಿಂತ ನಮಗೆ ದಾವೀದನ ಬಾಧ್ಯತೆಯು ಅಧಿಕವಾಗಿದೆ. ನಮ್ಮ ಅರಸನನ್ನು ತಿರಿಗಿ ಕರಕೊಂಡು ಬರುವದರ ವಿಷಯದಲ್ಲಿ ಮೊದಲು ಮಾತನಾಡಿ ದವರು ನಾವಲ್ಲವೋ? ಹಾಗಾದರೆ ನಮ್ಮನ್ನು ಯಾಕೆ ಅಲ್ಪವಾಗಿ ಎಣಿಸಿದಿರಿ ಅಂದರು. ಆದರೆ ಇಸ್ರಾಯೇಲ್‌ ಜನರ ಮಾತುಗಳಿಗಿಂತ ಯೆಹೂದ ಜನರ ಮಾತುಗಳು ಕಠಿಣವಾಗಿದ್ದವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದಕ್ಕೆ ಯೆಹೂದ್ಯರೆಲ್ಲರೂ - ಅರಸನು ನಮಗೆ ಸಮೀಪಬಂಧು; ನೀವು ಅದಕ್ಕಾಗಿ ಉರಿಗೊಳ್ಳುವದೇಕೆ? ನಾವೇನು ಅರಸನ ಖರ್ಚಿನಿಂದ ಊಟಮಾಡಿದೆವೋ? ಅವನು ನಮಗೆ ಏನಾದರೂ ಕೊಟ್ಟನೋ ಎಂದು ಉತ್ತರಕೊಟ್ಟರು.
Kannada Bible (KNCL) BSI 2016
ಅದಕ್ಕೆ ಯೆಹೂದ್ಯರೆಲ್ಲರು, “ಅರಸರು ನಮಗೆ ಸಮೀಪಬಂಧು; ನೀವು ಅದಕ್ಕಾಗಿ ಸಿಟ್ಟುಗೊಳ್ಳುವುದೇಕೆ? ನಾವೇನು ಅರಸರ ಖರ್ಚಿನಿಂದ ಊಟಮಾಡಿದೆವೋ? ಅವರು ನಮಗೆ ಏನಾದರೂ ಕೊಟ್ಟಿರುವರೋ?’ ಎಂದು ಉತ್ತರಕೊಟ್ಟರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಯೆಹೂದದವರೆಲ್ಲರೂ ಇಸ್ರಾಯೇಲರಿಗೆ ಉತ್ತರವಾಗಿ, “ಅರಸನು ನಮಗೆ ಸಮೀಪ ಬಂಧುವಾದುದರಿಂದ, ಈ ಕಾರ್ಯಕ್ಕೋಸ್ಕರ ನೀವು ಕೋಪಗೊಂಡಿರುವುದೇನು? ನಾವು ಅರಸನ ಖರ್ಚಿನಿಂದ ಏನಾದರೂ ಊಟ ಮಾಡಿದೆವೋ? ನಾವು ನಮಗಾಗಿ ಏನನ್ನಾದರೂ ತೆಗೆದುಕೊಂಡಿದ್ದೇವೆಯೇ?” ಎಂದರು.