2 Samuel 2:14 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅಬ್ನೇರನು ಯೋವಾಬನಿಗೆ, “ಯುವಜನರೆಲ್ಲ ಮೇಲೆದ್ದು, ಇಲ್ಲಿ ಹೋರಾಡಲಿ” ಎಂದು ಹೇಳಿದನು. ಯೋವಾಬನು “ಆಗಲಿ, ಅವರು ಹೋರಾಡಲಿ” ಎಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಅಬ್ನೇರನು ಯೋವಾಬನಿಗೆ, “ಎರಡು ಕಡೆಯ ತರುಣರು ಎದ್ದು ನಮ್ಮ ಮುಂದೆ ಸ್ಪರ್ಧಿಸಲಿ” ಎಂದು ಹೇಳಲು ಯೋವಾಬನು, “ಆಗಲಿ” ಅಂದನು.
Kannada BSI Bible 2016
ಆಗ ಅಬ್ನೇರನು ಯೋವಾಬನಿಗೆ--ಯೌವನಸ್ಥರು ಎದ್ದು ನಮ್ಮ ಮುಂದೆ ಆಡಲಿ ಅಂದನು. ಅದಕ್ಕೆ ಯೋವಾಬನು--ಅವರು ಏಳಲಿ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಅಬ್ನೇರನು ಯೋವಾಬನಿಗೆ - ಪ್ರಾಯಸ್ಥರು ಎದ್ದು ನಮ್ಮ ಮುಂದೆ ಆಡಲಿ ಎಂದು ಹೇಳಲು ಯೋವಾಬನು ಆಗಲಿ ಅಂದನು.
Kannada Bible (KNCL) BSI 2016
ಆಗ ಅಬ್ನೇರನು ಯೋವಾಬನಿಗೆ, “ಎರಡು ಕಡೆಯ ತರುಣರು ಎದ್ದುಬಂದು ನಮ್ಮ ಮುಂದೆ ದ್ವಂದ್ವಯುದ್ಧ ಮಾಡಲಿ,” ಎಂದು ಹೇಳಿದನು. ಯೋವಾಬನು ಅದಕ್ಕೆ ಒಪ್ಪಿಕೊಂಡನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅಬ್ನೇರನು ಯೋವಾಬನಿಗೆ, “ಕೆಲವು ಜನ ಯುವಕರು ಎದ್ದು ನಮ್ಮ ಮುಂದೆ ಮುಷ್ಠಿ ಯುದ್ಧ ಸ್ಪರ್ಧಿಸಲಿ,” ಎಂದನು. ಅದಕ್ಕೆ ಯೋವಾಬನು, “ಅವರು ಹಾಗೆಯೇ ಮಾಡಲಿ,” ಎಂದನು.