2 Samuel 2:22 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅಬ್ನೇರನು ಮತ್ತೆ ಅಸಾಹೇಲನಿಗೆ, “ನನ್ನನ್ನು ಅಟ್ಟಿಸಿಕೊಂಡು ಬರಬೇಡ; ಇಲ್ಲವಾದರೆ ನಾನು ನಿನ್ನನ್ನು ಕೊಲ್ಲುತ್ತೇನೆ. ನಾನು ನಿನ್ನನ್ನು ಕೊಂದುಬಿಟ್ಟರೆ, ನಿನ್ನ ಸೋದರನಾದ ಯೋವಾಬನ ಮುಖವನ್ನು ನಾನು ಮತ್ತೆ ನೋಡಲಾಗುವುದಿಲ್ಲ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಬ್ನೇರನು ತಿರುಗಿ ಅಸಾಹೇಲನಿಗೆ, “ನನ್ನನ್ನು ಬಿಟ್ಟು ಹೋಗು, ನಾನೇಕೆ ನಿನ್ನನ್ನು ನೆಲಕ್ಕುರುಳಿಸಬೇಕು? ಹಾಗೆ ಮಾಡಿದರೆ ನಿನ್ನ ಅಣ್ಣನಾದ ಯೋವಾಬನಿಗೆ ಹೇಗೆ ಮುಖ ತೋರಿಸಲಿ” ಅಂದನು.
Kannada BSI Bible 2016
ಅಬ್ನೇರನು ಅಸಾಹೇಲನಿಗೆ--ನೀನು ನನ್ನನ್ನು ಹಿಂಬಾಲಿಸುವದನ್ನು ಬಿಟ್ಟು ತಿರುಗಿ ಹೋಗು; ನಾನು ನಿನ್ನನ್ನು ನೆಲಕ್ಕೆ ಹೊಡೆದು ಬಿಡುವದು ಯಾಕೆ? ನಾನು ನಿನ್ನ ಸಹೋ ದರನಾದ ಯೋವಾಬನಿಗೆ ಮುಖತೋರಿಸುವದು ಹೇಗೆ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಬ್ನೇರನು ತಿರಿಗಿ - ನನ್ನನ್ನು ಬಿಟ್ಟುಹೋಗು; ನಾನೇಕೆ ನಿನ್ನನ್ನು ನೆಲಕ್ಕುರುಳಿಸಬೇಕು? ಹಾಗೆ ಮಾಡಿದರೆ ನಿನ್ನ ಅಣ್ಣನಾದ ಯೋವಾಬನಿಗೆ ಹೇಗೆ ಮೋರೆತೋರಿಸಲಿ ಅಂದನು.
Kannada Bible (KNCL) BSI 2016
ಮತ್ತೊಮ್ಮೆ ಅಬ್ನೇರನು, “ನನ್ನನ್ನು ಬಿಟ್ಟುಹೋಗು; ನಿನ್ನನ್ನು ಕೊಲ್ಲಲು ನನ್ನನ್ನೇಕೆ ಒತ್ತಾಯಿಸುವೆ? ಹಾಗೆ ಕೊಂದರೆ ನಿನ್ನ ಅಣ್ಣನಾದ ಯೋವಾಬನಿಗೆ ಹೇಗೆ ತಾನೆ ಮುಖ ತೋರಿಸಲಿ,” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅಬ್ನೇರನು ಅಸಾಯೇಲನಿಗೆ, “ನನ್ನನ್ನು ಬೆನ್ನಟ್ಟುವುದನ್ನು ಬಿಟ್ಟುಬಿಡು, ನಾನು ಏಕೆ ನಿನ್ನನ್ನು ನೆಲಕ್ಕೆ ಹೊಡೆದು ಕೆಡವಿಬಿಡಬೇಕು? ನಾನು ನಿನ್ನ ಅಣ್ಣನಾದ ಯೋವಾಬನಿಗೆ ಹೇಗೆ ಮುಖ ತೋರಿಸಲಿ?” ಎಂದನು.