2 Samuel 2:7 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಿಮ್ಮ ಒಡೆಯನಾದ ಸೌಲನು ಮರಣ ಹೊಂದಿರುವುದರಿಂದ, ಯೆಹೂದ ಕುಲದವರು ನನ್ನನ್ನು ತಮ್ಮ ರಾಜನನ್ನಾಗಿ ಅಭಿಷೇಕಿಸಿದ್ದಾರೆ. ಆದ್ದರಿಂದ ನೀವು ಬಲಿಷ್ಠರಾಗಿರಿ ಮತ್ತು ಧೈರ್ಯದಿಂದಿರಿ” ಎಂದು ಹೇಳಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೂದ್ಯರು ನನ್ನನ್ನು ಅಭಿಷೇಕಿಸಿ, ತಮ್ಮ ಅರಸನನ್ನಾಗಿ ಮಾಡಿಕೊಂಡಿದ್ದಾರೆ. ನಿಮ್ಮ ಅರಸನಾದ ಸೌಲನು ಸತ್ತುಹೋದರೂ ನೀವು ಶೂರರಾಗಿರಿ, ನಿಮ್ಮ ಕೈಗಳು ಜೋಲುಬೀಳದಿರಲಿ” ಎಂದು ಹೇಳಿ ಕಳುಹಿಸಿದನು.
Kannada BSI Bible 2016
ನೀವು ಪರಾ ಕ್ರಮಶಾಲಿಗಳಾಗಿದ್ದು ನಿಮ್ಮ ಕೈಗಳು ಬಲವಾಗಿರಲಿ; ನಿಮ್ಮ ಯಜಮಾನನಾದ ಸೌಲನು ಸತ್ತುಹೋದನು; ಯೆಹೂದನ ಮನೆಯವರು ನನ್ನನ್ನು ತಮ್ಮ ಮೇಲೆ ಅರಸನನ್ನಾಗಿ ಅಭಿಷೇಕಮಾಡಿದರು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೂದ್ಯರು ನನ್ನನ್ನು ಅಭಿಷೇಕಿಸಿ ತಮ್ಮ ಅರಸನನ್ನಾಗಿ ಮಾಡಿಕೊಂಡಿರುವದರಿಂದ ಸೌಲನು ಸತ್ತು ಹೋದರೂ ಶೂರರಾಗಿರ್ರಿ, ನಿಮ್ಮ ಕೈಗಳು ಜೋಲು ಬೀಳದಿರಲಿ ಎಂದು ಹೇಳಿಸಿದನು.
Kannada Bible (KNCL) BSI 2016
ಯೆಹೂದ್ಯರು ನನ್ನನ್ನು ಅಭಿಷೇಕಿಸಿ ತಮ್ಮ ಅರಸನನ್ನಾಗಿ ಮಾಡಿಕೊಂಡಿದ್ದಾರೆ. ಆದುದರಿಂದ ಸೌಲನು ಸತ್ತುಹೋಗಿದ್ದರೂ ನೀವು ಶೂರರಾಗಿರಿ; ನಿಮ್ಮ ಕೈಗಳು ಜೋಲುಬೀಳದಿರಲಿ,” ಎಂದು ಹೇಳಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀವು ಪರಾಕ್ರಮಶಾಲಿಗಳಾಗಿದ್ದು, ನಿಮ್ಮ ಕೈಗಳು ಬಲವಾಗಿರಲಿ. ಏಕೆಂದರೆ ನಿಮ್ಮ ಯಜಮಾನನಾದ ಸೌಲನು ಮರಣಹೊಂದಿದನು. ಯೆಹೂದನ ಮನೆಯವರು ನನ್ನನ್ನು ತಮ್ಮ ಮೇಲೆ ಅರಸನನ್ನಾಗಿ ಅಭಿಷೇಕ ಮಾಡಿದರು,” ಎಂದನು.