2 Samuel 20:11 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೋವಾಬನ ಯುವಸೈನಿಕರಲ್ಲಿ ಒಬ್ಬನು ಅಮಾಸನ ದೇಹದ ಹತ್ತಿರ ನಿಂತುಕೊಂಡು, “ಯೋವಾಬನನ್ನು ಮತ್ತು ದಾವೀದನನ್ನು ಬೆಂಬಲಿಸುವ ಪ್ರತಿಯೊಬ್ಬರೂ ಯೋವಾಬನನ್ನು ಹಿಂಬಾಲಿಸಲೇಬೇಕು. ಶೆಬನನ್ನು ಅಟ್ಟಿಸಿಕೊಂಡು ಹೋಗಲು ಅವನಿಗೆ ಸಹಾಯಮಾಡಿ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೋವಾಬನ ಆಳುಗಳಲ್ಲೊಬ್ಬನು ಅಮಾಸನ ಹತ್ತಿರ ನಿಂತು, “ದಾವೀದ ಹಾಗೂ ಯೋವಾಬರ ಕಡೆಯವರು ಯೋವಾಬನನ್ನು ಹಿಂಬಾಲಿಸಲಿ” ಎಂದು ಕೂಗಿದನು
Kannada BSI Bible 2016
ಯೋವಾಬನ ಜನರಲ್ಲಿ ಒಬ್ಬನು ಸತ್ತವನ ಬಳಿಯಲ್ಲಿ ನಿಂತು--ಯಾವನು ಯೋವಾಬನ ಮೇಲೆ ಇಷ್ಟವುಳ್ಳವನೋ ಯಾವನು ದಾವೀದನಿಗೆ ಹೊಂದಿದವನೋ ಅವನು ಯೋವಾಬನ ಹಿಂದೆ ಹೋಗಲಿ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೋವಾಬನ ಆಳುಗಳಲ್ಲೊಬ್ಬನು ಅಮಾಸನ ಹತ್ತಿರ ನಿಂತು - ದಾವೀದ ಯೋವಾಬರ ಕಡೆಯವರು ಯೋವಾಬನನ್ನು ಹಿಂಬಾಲಿಸಲಿ ಎಂದು ಕೂಗಿದನು.
Kannada Bible (KNCL) BSI 2016
“ಯೋವಾಬನೂ ಅವನ ತಮ್ಮನಾದ ಅಬೀಷೈಯೂ ಬಿಕ್ರೀಯ ಮಗನಾದ ಶೆಬನನ್ನು ಹಿಂದಟ್ಟುವುದಕ್ಕಾಗಿ ಮುಂದೆ ನಡೆದಾಗ ಯೋವಾಬನ ಆಳುಗಳಲ್ಲೊಬ್ಬನು ಅಮಾಸನ ಹತ್ತಿರ ನಿಂತು, “ದಾವೀದ ಹಾಗು ಯೋವಾಬರ ಕಡೆಯವರು ಯೋವಾಬನನ್ನು ಹಿಂಬಾಲಿಸಲಿ,” ಎಂದು ಕೂಗಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೋವಾಬನ ಜನರಲ್ಲಿ ಒಬ್ಬನು ಸತ್ತವನ ಬಳಿಯಲ್ಲಿ ನಿಂತು, “ಯಾವನು ಯೋವಾಬನ ಮೇಲೆ ಇಷ್ಟವುಳ್ಳವನೋ, ಯಾವನು ದಾವೀದನಿಗೆ ಹೊಂದಿದವನೋ, ಅವನು ಯೋವಾಬನ ಹಿಂದೆ ಹೋಗಲಿ,” ಎಂದನು.