2 Samuel 20:15 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೋವಾಬನು ತನ್ನ ಜನರೊಂದಿಗೆ ಆಬೇಲ್ಬೇತ್ಮಾಕಾ ಊರಿಗೆ ಬಂದನು. ಯೋವಾಬನ ಸೈನ್ಯವು ಪಟ್ಟಣವನ್ನು ಸುತ್ತುಗಟ್ಟಿತು. ಅವರು ನಗರದ ಗೋಡೆಯ ಹತ್ತಿರ ಮಣ್ಣಿನ ದಿಬ್ಬವನ್ನು ಮಾಡಿ ಗೋಡೆಯನ್ನು ಸಮೀಪಿಸಿದರು; ನಂತರ ಆ ಗೋಡೆಯನ್ನು ಬೀಳಿಸುವುದಕ್ಕಾಗಿ ಅದನ್ನು ಹೊಡೆಯಲಾಂಭಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೋವಾಬನ ಕಡೆಯವರು ಆಬೇಲ್ ಬೇತ್ಮಾಕಾಕ್ಕೆ ಊರಿಗೆ ಮುತ್ತಿಗೆ ಹಾಕಿ ಅದಕ್ಕೆ ಎದುರಾಗಿ ಊರು ಗೋಡೆಗೆ ಹತ್ತಿರ ಒಂದು ಮಣ್ಣಿನ ದಿಬ್ಬವನ್ನು ಮಾಡಿ, ಗೋಡೆಯನ್ನು ಕೆಡವಿಬಿಡುವುದಕ್ಕೆ ಪ್ರಯತ್ನಿಸಿದರು.
Kannada BSI Bible 2016
ಅವರು ಬಂದು ಅವನು ಇದ್ದ ಆಬೇಲ್ಬೇತ್ಮಾಕನ್ನು ಮುತ್ತಿಗೆ ಹಾಕಿ ಪಟ್ಟಣಕ್ಕೆದುರಾಗಿ ಕಂದಕದ ಗುಡ್ಡೆಯವರೆಗೆ ಮಣ್ಣಿನ ದಿಬ್ಬವನ್ನು ಹಾಕಿದರು. ಯೋವಾಬನ ಸಂಗಡಲಿರುವ ಜನರೆಲ್ಲರೂ ಗೋಡೆಯನ್ನು ಕೆಡವುವದಕ್ಕೆ ಹೊಡೆ ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೋವಾಬನ ಕಡೆಯವರು ಆಬೇಲ್ಬೇತ್ಮಾಕಾ ಊರಿಗೆ ಮುತ್ತಿಗೆಹಾಕಿ ಅದಕ್ಕೆ ಎದುರಾಗಿ ಊರುಗೋಡೆಗೆ ತಗಲುವ ಒಂದು ಮಣ್ಣಿನ ದಿಬ್ಬವನ್ನು ಮಾಡಿ ಗೋಡೆಯನ್ನು ಕೆಡವಿಬಿಡುವದಕ್ಕೆ ಪ್ರಯತ್ನಿಸಿದರು.
Kannada Bible (KNCL) BSI 2016
ಯೋವಾಬನ ಕಡೆಯವರು ಅಬೇಲ್ಬೇತ್ಮಾಕಾ ಊರಿಗೆ ಮುತ್ತಿಗೆಹಾಕಿದರು. ಅದರ ಹೊರಗೋಡೆಯ ಹತ್ತಿರ ಒಂದು ಮಣ್ಣಿನ ದಿಬ್ಬವನ್ನು ಮಾಡಿ ಗೋಡೆಯ ಕೆಳಗೆ ಅಗೆಯುತ್ತಾ ಅದನ್ನು ಕೆಡವಿಬಿಡುವುದಕ್ಕೆ ಪ್ರಯತ್ನಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೋವಾಬನ ಜೊತೆಗಿದ್ದ ಸೈನಿಕರು ಬಂದು ಆಬೇಲ್ ಬೇತ್ ಮಾಕಾ ಊರಿಗೆ ಮುತ್ತಿಗೆ ಹಾಕಿ, ಪಟ್ಟಣಕ್ಕೆದುರಾಗಿ ಊರು ಗೋಡೆಯವರೆಗೆ ಮಣ್ಣಿನ ದಿಬ್ಬವನ್ನು ಮಾಡಿದರು. ಯೋವಾಬನ ಸಂಗಡದಲ್ಲಿರುವ ಜನರೆಲ್ಲರೂ ಗೋಡೆಯನ್ನು ಕೆಡವಿಬಿಡುವುದಕ್ಕೆ ಪ್ರಯತ್ನಿಸಿದರು.