2 Samuel 20:16 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆ ನಗರದ ಬುದ್ಧಿವಂತೆ ಸ್ತ್ರೀಯೊಬ್ಬಳು ಪಟ್ಟಣದೊಳಗಿಂದ ಜೋರಾಗಿ ಕೂಗುತ್ತಾ, “ನನ್ನ ಮಾತನ್ನು ಕೇಳಿ. ಯೋವಾಬನನ್ನು ಇಲ್ಲಿಗೆ ಬರಲು ಹೇಳಿ. ನಾನು ಅವನ ಜೊತೆಯಲ್ಲಿ ಮಾತಾಡಬೇಕಾಗಿದೆ” ಎಂದು ಹೇಳಿದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಆ ಊರಿನ ಬುದ್ಧಿವಂತೆಯಾದ ಒಬ್ಬಳು ಹೆಂಗಸು ಅವರಿಗೆ, “ಕೇಳಿರಿ, ದಯವಿಟ್ಟು ಕೇಳಿರಿ. ಯೋವಾಬನೊಂದಿಗೆ ನಾನು ಮಾತನಾಡುವುದಕ್ಕಾಗಿ ನನ್ನ ಬಳಿಗೆ ಬರಬೇಕೆಂದು ಹೇಳಿ” ಎಂದು ಕೂಗಿದಳು.
Kannada BSI Bible 2016
ಆಗ ಜ್ಞಾನವುಳ್ಳ ಒಬ್ಬ ಸ್ತ್ರೀಯು ಪಟ್ಟಣದಲ್ಲಿಂದ--ಕೇಳಿರಿ, ಕೇಳಿರಿ, ನಾನು ಯೋವಾಬನ ಸಂಗಡ ಮಾತನಾಡುವ ಹಾಗೆ ಅವನು ಇಲ್ಲಿಗೆ ಸವಿಾಪಿ ಸಲು ಬರಹೇಳಿರಿ ಎಂದು ಕೂಗಿ ಬೇಡಿಕೊಂಡಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಆ ಊರಿನ ಬುದ್ಧಿವಂತೆಯಾದ ಒಬ್ಬ ಹೆಂಗಸು ಅವರಿಗೆ - ಕೇಳಿರಿ, ದಯವಿಟ್ಟು ಕೇಳಿರಿ; ಯೋವಾಬನು ಮಾತಾಡುವದಕ್ಕೋಸ್ಕರ ನನ್ನ ಬಳಿಗೆ ಬರಬೇಕೆಂದು ಹೇಳಿರಿ ಎಂದು ಕೂಗಿದಳು.
Kannada Bible (KNCL) BSI 2016
ಆಗ ಆ ಊರಿನ ಬುದ್ಧಿವಂತೆಯಾದ ಒಬ್ಬ ಮಹಿಳೆ ಅವರಿಗೆ, “ಕೇಳಿ, ದಯವಿಟ್ಟು ಕೇಳಿ; ಯೋವಾಬನು ಮಾತಾಡುವುದಕ್ಕಾಗಿ ನನ್ನ ಬಳಿಗೆ ಬರಬೇಕೆಂದು ಹೇಳಿ,” ಎಂದು ಕೂಗಿದಳು. ಯೋವಾಬನು ಬಂದನು. ಆ ಸ್ತ್ರೀ,
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಜ್ಞಾನವುಳ್ಳ ಒಬ್ಬ ಸ್ತ್ರೀಯು ಪಟ್ಟಣದಲ್ಲಿಂದ, “ಕೇಳಿರಿ, ಕೇಳಿರಿ. ನಾನು ಯೋವಾಬನ ಸಂಗಡ ಮಾತನಾಡುವ ಹಾಗೆ ಅವನು ಇಲ್ಲಿಗೆ ಸಮೀಪಿಸಲು ಬರಹೇಳಿರಿ,” ಎಂದು ಕೂಗಿ ಬೇಡಿಕೊಂಡಳು.